ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದು, ಅಭಿಮಾನಿಗಳಿಗೆ ತೀವ್ರ ಬೇಸರ ವಾಗಿದೆ. ಆದರೂ ತಮ್ಮ ನೆಚ್ಚಿನ ಆಟಗಾರನ ನಿವತ್ತಿಗೆ ವಿಶೇಷ ರೀತಿಯಲ್ಲಿ ಗೌರವ ಸೂಚಿಸಲು RCB ಫ್ಯಾನ್ಸ್ ಗಳು ನಿರ್ಧರಿಸಿದ್ದಾರೆ.
ವಿರಾಟ್ ಕೊಹ್ಲಿ ಸರಣಿ ನಡುವೆ ಅಥವಾ ಮೊದಲೇ ಘೋಷಿಸಿ ಗಾರ್ಡ್ ಆಫ್ ಹಾನರ್ ಪಡೆದು ನಿವೃತ್ತಿಯಾಗಿದ್ದರೂ ಕೊಹ್ಲಿ ಅಭಿಮಾನಿಗಳು ಕೊಂಚ ಸಮಾಧಾನ ಪಡುತ್ತಿದ್ದರು. ಆದರೆ ಏಕಾಏಕಿ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದಾರೆ.
ಹೀಗಾಗಿ ಆರ್‌ಸಿಬಿ ಅಭಿಮಾನಿಗಳು ಕೊಹ್ಲಿಗೆ ಗೌರವಯುತ ವಿದಾಯ ಹೇಳಲು ಸಜ್ಜಾಗಿದ್ದು, ಮುಂದಿನ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹಾಜರಾಗುವಾಗ ವೈಟ್ ಜರ್ಸಿ ಅಥವಾ ವೈಟ್ ಟಿಶರ್ಟ್ ಧರಿಸಿ ಬರುವಂತೆ ಆರ್‌ಸಿಬಿ ಅಭಿಮಾನಿಗಳು ಮನವಿ ಮಾಡಿದ್ದಾರೆ.
ಆರ್‌ಸಿಬಿ ಅಭಿಮಾನಿಗಳ ಪೋಸ್ಟರ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದಕ್ಕೆ ಭರ್ಜರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಕೊಹ್ಲಿಗೆ ಟೆಸ್ಟ್ ಟ್ರಿಬ್ಯೂಟ್ ಜೊತೆಗೆ ವಿಶ್ವಕ್ಕೆ ಶಾಂತಿಯ ಸಂದೇಶ ನೀಡುತ್ತೇವೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.