ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ 20 ಕೋಟಿ ರೂ. ನಗದು ಬಹುಮಾನವನ್ನು ಪಡೆಯಲಿದೆ.
ಐಪಿಎಲ್ ಆಡಳಿತ ಸಮಿತಿ ಈ ವರ್ಷ ಎಷ್ಟು ನಗದು ಬಹುಮಾನವನ್ನು ನೀಡಲಾಗುತ್ತದೆ ಎಂಬುದನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ 2022 ರಲ್ಲಿ ಘೋಷಣೆಯಾದ ನಗದು ಬಹುಮಾನವನ್ನೇ 2023, 2024 ರಲ್ಲಿ ನೀಡಲಾಗಿತ್ತು.
ಚಾಂಪಿಯನ್ ತಂಡ 20 ಕೋಟಿ ರೂ., ರನ್ನರ್ ಅಪ್ 13 ಕೋಟಿ ರೂ., ಕ್ವಾಲಿಫೈಯರ್‌ನಲ್ಲಿ 3ನೇ ಸ್ಥಾನ ಪಡೆದ ಮುಂಬೈಗೆ 7 ಕೋಟಿ ರೂ. ಎಲಿಮಿನೇಟರ್‌ನಲ್ಲಿ ಔಟ್‌ಗಿ ನಾಲ್ಕನೇ ಸ್ಥಾನ ಪಡೆದ ಗುಜರಾತ್ ಟೈಟಾನ್ಸ್‌ಗೆ 6.5 ಕೋಟಿ ರೂ. ಸಿಗಲಿದೆ. ತಂಡಗಳಿಗೆ ಮಾತ್ರ ಅಲ್ಲದೇ ವೈಯಕ್ತಿಕ ಪ್ರಶಸ್ತಿಗಳಿಗೂ ನಗದು ಬಹುಮಾನಗಳಿವೆ.
ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಹೊಡೆದ ಬ್ಯಾಟ್ಸ್‌ಮನ್, ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್, ಸೂಪರ್ ಸ್ಟ್ರೈಕರ್, ಪವರ್ ಪ್ಲೇಯರ್, ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ, ಗೇಮ್ ಚೇಂಜರ್ ಪ್ರಶಸ್ತಿಗೆ 10 ಲಕ್ಷ ರೂ. ಸಿಗುತ್ತದೆ.