ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಪಟ್ಟವನ್ನ ಮುಡಿಗೇರಿಸಿಕೊಂಡಿದೆ. ಆದರೆ, ಆರ್‌ಸಿಬಿ ಫ್ಯಾನ್ಸ್‌ಗಳು ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸುತ್ತಿದ್ದಾಗಲೇ ದುರಂತ ಸಂಭವಿಸಿದೆ. ಕಾಲ್ತುಳಿತದಲ್ಲಿ ಉಂಟಾದ ಅಭಿಮಾನಿಗಳ ಸಾವು-ನೋವಿಗೆ ಆರ್‌ಸಿಬಿ ಫ್ರಾಂಚೈಸಿ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಅನ್ನೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗ್ಗೆ 7:01 ಗಂಟೆಗೆ ಆರ್‌ಸಿಬಿ ಫ್ರಾಂಚೈಸಿ ಇಂದು 3:30ರ ಬಳಿಕ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂ ವರೆಗೆ ವಿಕ್ಟರಿ ಪೆರೇಡ್ ನಡೆಸೋದಾಗಿ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನ ಹಂಚಿಕೊಂಡಿತ್ತು. ಆದ್ರೆ ಘೋಷಣೆಗೂ ಮುನ್ನ ಯಾವುದೇ ಪೊಲೀಸ್ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ.
ಪೊಲೀಸರು ಸಹ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಮ್ಯಾನೇಜ್ಮೆಂಟ್‌ಗೂ ಸರಿಯಾದ ಸೂಚನೆ ಕೊಡದೇ 11 ಗಂಟೆಯಾದ್ರೂ ಸಭೆ ಮಾಡುವುದರಲ್ಲೇ ಕಾಲ ಕಳೆದರು. ನಿರಂತರ ಸಭೆ ನಡೆಸುತ್ತಿದ್ದ ಪೊಲೀಸರು 12 ಗಂಟೆ ಕಳೆದರೂ ಸರಿಯಾದ ತೀರ್ಮಾನಕ್ಕೆ ಬರೋದ್ರಲ್ಲಿ ವಿಫಲರಾಗಿದ್ದರು ಎಂದು ಹೇಳಲಾಗಿದೆ.