ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಇಂಡಿಯನ್ಸ್ ವಿರುದ್ಧದ ಮಹತ್ವದ ಐಪಿಎಲ್ ಪಂದ್ಯಕ್ಕೆ ಸಜ್ಜಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ದಿಗ್ಗಜ ಗಾಯಕಿ ಆಶಾ ಭೋಸ್ಲೆ ಅವರ ನಿಧನಕ್ಕೆ ಭಾವನಾತ್ಮಕವಾಗಿ ಸಂತಾಪ ಸೂಚಿಸಿದೆ. ಸಂಗೀತ ಲೋಕದ ಮಹಾನ್ ಧ್ವನಿಯ ಅಗಲಿಕೆಗೆ ಕ್ರೀಡಾ ಜಗತ್ತಿನಿಂದಲೂ ಶ್ರದ್ಧಾಂಜಲಿ ವ್ಯಕ್ತವಾಗುತ್ತಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಭ್ಯಾಸದಲ್ಲಿರುವ ಆರ್ಸಿಬಿ ತಂಡ, ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಸಂತಾಪ ಸಂದೇಶ ಹಂಚಿಕೊಂಡಿದೆ. “ಕಾಲಾತೀತ ಧ್ವನಿ, ಮರೆಯಲಾಗದ ಪರಂಪರೆ… ಆಶಾ ಭೋಸ್ಲೆ ಅವರ ಸಂಗೀತ ಎಂದೆಂದಿಗೂ ಅಮರ” ಎಂಬ ಸಂದೇಶದ ಮೂಲಕ ತಂಡವು ಗೌರವ ನಮನ ಸಲ್ಲಿಸಿದೆ.
ಇದನ್ನೂ ಓದಿ:
ಇಂದು ನಡೆಯಲಿರುವ ಆರ್ಸಿಬಿ–ಮುಂಬೈ ಇಂಡಿಯನ್ಸ್ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಎರಡೂ ತಂಡಗಳ ಆಟಗಾರರು ಮೌನಾಚರಣೆ ಅಥವಾ ಕಪ್ಪು ಪಟ್ಟಿ ಧರಿಸಿ ಗೌರವ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ವಿಶೇಷವಾಗಿ ಪಂದ್ಯ ಮುಂಬೈನಲ್ಲೇ ನಡೆಯುತ್ತಿರುವುದರಿಂದ, ಅಭಿಮಾನಿಗಳ ಮನದಲ್ಲೂ ಇದು ಭಾರೀ ಭಾವುಕ ಕ್ಷಣವಾಗಲಿದೆ.



