ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ನಮ್ಮ ಬೆಂಗಳೂರು ತಂಡ ಗೆದ್ದು ಜಯಶಾಲಿಯಾಗಿದೆ. ಹೈ ಟೆನ್ಶನ್ ಪಂದ್ಯದಲ್ಲಿ ಆರ್‌ಸಿಬಿ 27 ರನ್‌ಗಳಿಂದ ಚೆನ್ನೈ ತಂಡವನ್ನು ಸೋಲಿಸಿ ಪ್ಲೇ ಆಫ್ ಗೆ ಲಗ್ಗೆ ಇಟ್ಟಿದೆ.
ಆರ್‌ಸಿಬಿಯ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ಪ್ಲೇಆಫ್ ತಲುಪಿರುವ ಬೆಂಗಳೂರು ತಂಡವನ್ನು ಅಭಿನಂದಿಸಿದ್ದಾರೆ.
ಉದ್ಯಮಿ ವಿಜಯ್ ಮಲ್ಯ ಅವರು ಎಕ್ಸ್-ಪೋಸ್ಟ್ ಜೊತೆಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಆರ್‌ಸಿಬಿ ಪ್ಲೇಆಫ್‌ಗೆ ಲಗ್ಗೆ ಇಟ್ಟಿರುವುದಕ್ಕೆ ತುಂಬಾ ಖುಷಿಯಾಗಿದೆ. ನನ್ನ ಹೃದಯ ಪೂರ್ವಕ ಅಭಿನಂದನೆ ಹೇಳಲು ಬಯಸುತ್ತೇನೆ. ಸತತ ಸೋಲುಗಳ ನಂತರ ನೀವು ಎಷ್ಟು ಚೆನ್ನಾಗಿ ಟ್ರ್ಯಾಕ್‌ಗೆ ಮರಳಿದ್ದೀರಿ ಎಂಬುದು ಅದ್ಭುತವಾಗಿದೆ. ಕಪ್ ಗೆಲ್ಲಲು ಆರ್‌ಸಿಬಿ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಬೇಕಿದೆ ಎಂದು ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ.
Heartiest congratulations to RCB for qualifying in the top four and reaching the IPL playoffs. Great determination and skill have created a winning momentum after a disappointing start. Onward and upward towards the trophy.
— Vijay Mallya (@TheVijayMallya) May 18, 2024