ಬೆಂಗಳೂರಿನಲ್ಲಿಂದು RCB ವಿಜಯೋತ್ಸವ ಮೆರವಣಿಗೆ: ಎಲ್ಲಿಂದ, ಯಾವಾಗ ಶುರು? ಇಲ್ಲಿದೆ ಡೀಟೇಲ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೋಟ್ಯಾಂತರ ಅಭಿಮಾನಿಗಳ ಬೆಂಬಲ, ಹಾರೈಕೆ, ಪ್ರಾರ್ಥನೆ ಕೊನೆಗೂ ಫಲಿಸಿದೆ. 18ನೇ ಪ್ರಯತ್ನದಲ್ಲಿ ಆರ್’ಸಿಬಿ ತಂಡ ಟ್ರೋಫಿಗೆ ಮುತ್ತಿಟ್ಟಿದೆ.

ಈ ಐತಿಹಾಸಿಕ ಗೆಲುವು ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಜಯೋತ್ಸವದ ಮೆರವಣಿಗೆಯನ್ನು ಘೋಷಣೆ ಮಾಡಿದೆ. ಗೆಲುವು ಬೆನ್ನಲ್ಲೇ ಆರ್​ಸಿಬಿ ಫ್ರಾಂಚೈಸಿ ತಮ್ಮ ನಿಷ್ಠಾವಂತ ಅಭಿಮಾನಿಗಳೊಂದಿಗೆ ಗೆಲುವಿನ ಸಂಭ್ರಮಾಚರಣೆ ಮಾಡಲು ವಿಜಯೋತ್ಸವದ ಮೆರವಣಿಗೆಯನ್ನು ಘೋಷಣೆ ಮಾಡಿದೆ.

ಇಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿನಲ್ಲಿ ಆರ್​ಸಿಬಿ ವಿಜಯೋತ್ಸವದ ಮೆರವಣಿಗೆ ನಡೆಯಲಿದೆ. ಈ ವಿಜಯೋತ್ಸವ ಮೆರಣವಣಿಗೆ ವಿಧಾನಸೌಧದಿಂದ ಆರಂಭವಾಗಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಕ್ತಾಯವಾಗಲಿದೆ. ಆಟಗಾರರನ್ನು ಸ್ವಾಗತಿಸಲು ಬೆಂಗಳೂರು ಸಜ್ಜಾಗಿದ್ದು, ವಿಜಯೋತ್ಸವ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗಿಯಾಗುವ ನಿರೀಕ್ಷೆಗಳಿವೆ.

ವಿಜಯೋತ್ಸವ ಮೆರವಣಿಗೆಯನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲೈವ್‌ ಆಗಿಯೂ ವೀಕ್ಷಿಸಬಹುದು. ಜೊತೆಗೆ, ಜಿಯೋ ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮೂಲಕವೂ ವೀಕ್ಷಿಸುವ ಅವಕಾಶವಿದೆ.

 

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!