April 3, 2026
Friday, April 3, 2026
spot_img

RCB vs CSK ಸೂಪರ್ ಸಂಡೇ ಮ್ಯಾಚ್: ಮೆಟ್ರೋ ಸೇವೆಯ ಅವಧಿ ವಿಸ್ತರಣೆ, ಅಭಿಮಾನಿಗಳಿಗೆ ಸ್ಪೆಷಲ್ ಬಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಭಾನುವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹೈವೋಲ್ಟೇಜ್ ಐಪಿಎಲ್ ಪಂದ್ಯಕ್ಕಾಗಿ ನಗರದಲ್ಲಿ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

ಅಭಿಮಾನಿಗಳ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಸೇವೆಯ ಅವಧಿಯನ್ನು ಮಧ್ಯರಾತ್ರಿಗೂ ಮೀರಿಸಿ ವಿಸ್ತರಿಸಿದ್ದು, ಬಿಎಂಟಿಸಿ ವಿಶೇಷ ಬಸ್‌ಗಳನ್ನು ಕೂಡ ಕಾರ್ಯಗತಗೊಳಿಸಿದೆ.

ಮೆಟ್ರೋ ನಿಗಮದ ಮಾಹಿತಿ ಪ್ರಕಾರ ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಬೊಮ್ಮಸಂದ್ರದಿಂದ ಕೊನೆಯ ರೈಲು ರಾತ್ರಿ 12.30ಕ್ಕೆ ಹೊರಡಲಿದೆ. ಚಲ್ಲಘಟ್ಟ, ಸಿಲ್ಕ್ ಇನ್‌ಸ್ಟಿಟ್ಯೂಟ್ ಹಾಗೂ ಮಾದವರದಿಂದ 12.45ಕ್ಕೆ, ಮೆಜೆಸ್ಟಿಕ್‌ನಿಂದ ನಾಲ್ಕು ದಿಕ್ಕುಗಳಿಗೆ 1.30ಕ್ಕೆ ಹಾಗೂ ಆರ್‌ವಿ ರಸ್ತೆಯಿಂದ ಬೆಳಿಗ್ಗೆ 2 ಗಂಟೆಯವರೆಗೆ ಸೇವೆ ಲಭ್ಯವಿರಲಿದೆ. ಡಿಜಿಟಲ್ ಪಂದ್ಯ ಟಿಕೆಟ್ ಹೊಂದಿರುವವರಿಗೆ ದ್ವಿಮುಖ ಪ್ರಯಾಣಕ್ಕಾಗಿ ಕ್ಯೂಆರ್ ಕೋಡ್ ಸೌಲಭ್ಯವೂ ಒದಗಿಸಲಾಗಿದೆ.

ಇದನ್ನೂ ಓದಿ:

ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸುವ ಅಭಿಮಾನಿಗಳಿಗಾಗಿ 43 ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ ₹30 ಹಾಗೂ ಕಾರುಗಳಿಗೆ ₹60 ನಿಗದಿತ ಶುಲ್ಕ ವಿಧಿಸಲಾಗಿದೆ. ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳನ್ನು ಬಳಸಿ ಕ್ರೀಡಾಂಗಣ ತಲುಪುವಂತೆ ಸೂಚಿಸಲಾಗಿದೆ.

ಇದೇ ವೇಳೆ, ಪಂದ್ಯ ಮುಗಿದ ಬಳಿಕ ಅಭಿಮಾನಿಗಳ ಸುಗಮ ಪ್ರಯಾಣಕ್ಕಾಗಿ ಬಿಎಂಟಿಸಿ ವಿವಿಧ ಭಾಗಗಳಿಗೆ ವಿಶೇಷ ಬಸ್ ಸೇವೆಗಳನ್ನು ಒದಗಿಸಲಿದೆ. ಕಳೆದ ಪಂದ್ಯದಲ್ಲಿ 22 ಸಾವಿರಕ್ಕೂ ಹೆಚ್ಚು ಮಂದಿ ಮೆಟ್ರೋ ಸೇವೆ ಬಳಸಿದ್ದ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚುವರಿ ಸಿದ್ಧತೆ ಮಾಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !