September 14, 2026
Monday, September 14, 2026
spot_img

RCB vs GT IPL 2026: ಇಂದು ಐಪಿಎಲ್ 19ರ ಫೈನಲ್ ಮಹಾಸಮರ: ಗೆದ್ದವರು ಇತಿಹಾಸ ಬರೆಯುವುದು ಖಚಿತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್-19ರ ಮಹಾ ಸಂಗ್ರಾಮಕ್ಕೆ ಕೌಂಟ್‌ಡೌನ್ ಮುಗಿದಿದೆ. ಮೇ 31 ರ ಭಾನುವಾರವಾದ ಇಂದು ನಡೆಯಲಿರುವ ಮೆಗಾ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗುತ್ತಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಪಂದ್ಯ ಜರುಗಲಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ರೋಮಾಂಚನ ಸೃಷ್ಟಿಸಿದೆ.

2ನೇ ಬಾರಿ ಚಾಂಪಿಯನ್ ಪಟ್ಟ ಯಾರಿಗೆ?


ವಿಶೇಷವೆಂದರೆ, ಫೈನಲ್ ತಲುಪಿರುವ ಆರ್​ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಈಗಾಗಲೇ ತಲಾ ಒಂದು ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿವೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಜಯ ಸಾಧಿಸುವ ತಂಡವು 2ನೇ ಬಾರಿಗೆ ಚಾಂಪಿಯನ್ ಆಗಿ ಇತಿಹಾಸ ಬರೆಯಲಿದೆ. ಗುಜರಾತ್ ಟೈಟಾನ್ಸ್ ತಂಡಕ್ಕೆ ಇದು ತವರು ಮೈದಾನದ ಲಾಭ ತಂದುಕೊಟ್ಟರೆ, ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಕಠಿಣ ಸವಾಲು ನೀಡಲು ಸಜ್ಜಾಗಿದೆ.

ಪಂದ್ಯದ ಸಮಯ ಮತ್ತು ಟಾಸ್ ವಿವರ:

ದಿನಾಂಕ: ಮೇ 31, 2026 (ಇಂದು)

ಸ್ಥಳ: ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್

ಟಾಸ್ ಸಮಯ: ಸಂಜೆ 7:00 ಗಂಟೆಗೆ

ಪಂದ್ಯದ ಆರಂಭ: ರಾತ್ರಿ 7:30ಕ್ಕೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !