ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಳೆ ಜೈಪುರ ಕ್ರಿಕೆಟ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ತಾನ್ ರಾಯಲ್ಸ್ ಮಧ್ಯೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
RCB ಇನ್ನೂ ಸ್ಥಿರ ಫಲಿತಾಂಶಗಳನ್ನು ನೀಡಿಲ್ಲ. 4 ಪಂದ್ಯಗಳಿಂದ ಕೇವಲ 2 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಹೀನಾಯ ಸೋಲು ಕಂಡಿತ್ತು. ಇದರಿಂದ ನೆಟ್ ರನ್ ರೇಟ್ ಕೂಡ ಹದಗೆಟ್ಟಿದೆ.
ಸದ್ಯಕ್ಕೆ ವಿರಾಟ್ ಹೊರತು ಪಡಿಸಿ ಯಾರೂ ಪ್ರದರ್ಶನ ನೀಡಲು ಸಾಧ್ಯವಾಗದಿರುವುದು ಎಲ್ಲರಿಗೂ ತಲೆನೋವು ತಂದಿದೆ.
ಆರ್ ಸಿಬಿ vs ರಾಜಸ್ಥಾನ ಪಂದ್ಯದ ವೇಳೆ ಮಳೆ ಬರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ರಾತ್ರಿ 7 ಗಂಟೆಯಿಂದ 9ರ ನಡುವೆ ಮಳೆ ಬರುವ ಸಾಧ್ಯತೆ ಇದ್ದು, ಪಂದ್ಯ ರದ್ದು ಕೂಡ ಆಗಬಹುದು ಎನ್ನಲಾಗಿದೆ.