ಹೊಸದಿಗಂತ ವರದಿ,ಕಲಬುರಗಿ:
ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮವೆಸಗಿದ ಕಿಂಗ್ ಪಿನ್ ಅರ್ಥ.ಡಿ.ಪಾಟೀಲ್ ಕೊನೆಗೂ ಪೋಲಿಸರ ಬಲೆಗೆ ಬಿದ್ದಿದ್ದಾನೆ.
ಕಳೆದ ೧೨ ದಿನಗಳಿಂದ ಪೋಲಿಸರ ಕಣ್ಣು ತಪ್ಪಿಸಿ, ಕಣ್ಣಾಮುಚ್ಚಾಲೆ ಆಡುತ್ತಾ ಬಂದಿರುವ ಕಿಂಗ್ ಪಿನ್ ಆರ್.ಡಿ.ಪಾಟೀಲ ಕೊನೆಗೂ ಮಹಾರಾಷ್ಟ್ರದಲ್ಲಿ ಕಲಬುರಗಿ ಪೋಲಿಸರ ಕೈಗೆ ಬಿದ್ದಿದ್ದು, ಇದೀಗ ಪೋಲಿಸರು ಆತನನ್ನು ಕಲಬುರಗಿ ಗೆ ಕರೆದುಕೊಂಡು ಬರುತ್ತಿದ್ದಾರೆ ಎಂಬುದು ತಿಳಿದುಬಂದಿದೆ.