ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯ ಹಿಂಸಾಚಾರದ ನಂತರ, ಸೋಮವಾರ ಬೆಳಿಗ್ಗೆ 7 ರಿಂದ 697 ಮತಗಟ್ಟೆಗಳಲ್ಲಿ ಮರು ಮತದಾನ ಪ್ರಾರಂಭವಾಗಲಿದೆ. ಹಿಂಸಾಚಾರದ ಒಂದು ದಿನದ ನಂತರ, ಬಂಗಾಳದ ರಾಜ್ಯ ಚುನಾವಣಾ ಆಯೋಗವು 697 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವುದಾಗಿ ಘೋಷಿಸಿದೆ. 19 ಜಿಲ್ಲೆಗಳ 697 ಮತಗಟ್ಟೆಗಳಲ್ಲಿ ಭಾರೀ ಸಶಸ್ತ್ರ ಭದ್ರತೆಯ ನಡುವೆ ಮತದಾನ ನಡೆಯುತ್ತಿದೆ.
ಮಾಲ್ಡಾದಲ್ಲಿ 110, ನಾಡಿಯಾದಲ್ಲಿ 89, ಕೂಚ್ ಬೆಹಾರ್‌ನಲ್ಲಿ 53, ಉತ್ತರ 24 ಪರಗಣಗಳಲ್ಲಿ 46, ಉತ್ತರ ದಿನಾಜ್‌ಪುರದಲ್ಲಿ 42, ದಕ್ಷಿಣ 24 ಪರಗಣಗಳಲ್ಲಿ 36, ಪುರ್ಬಾ ಮೇದಿನಿಪುರದಲ್ಲಿ 31, ಪುರ್ಬಾ ಮೇದಿನಿಪುರದಲ್ಲಿ 31, ಹೂಗ್ಲಿಯಲ್ಲಿ 18, ದಕ್ಷಿಣ ದಿನಾಜ್‌ಪುರದಲ್ಲಿ 18, ಜಲ್ಪೈಗುರಿಯಲ್ಲಿ 14, ಬಿರ್ಭುಮ್ 14, ಪಶ್ಚಿಮ ಮೇದಿನಿಪುರ 10, ಬಂಕುರಾದಲ್ಲಿ 8, ಹೌರಾದಲ್ಲಿ 8, ಪಶ್ಚಿಮ್ ಬರ್ಧಮಾನ್‌ನಲ್ಲಿ 6, ಪುರುಲಿಯಾ, ಪುರ್ಬಾ ಬರ್ಧಮಾನ್ 3 ಮತ್ತು ಅಲಿಪುರ್‌ದಾರ್‌ನಲ್ಲಿ 1 ಮತಗಟ್ಟೆ ಕೇಂದ್ರದಲ್ಲಿ ಮರು ಮತದಾನ ನಡೆಯುತ್ತಿದೆ.
ಬಂಗಾಳದಲ್ಲಿ ಪಂಚಾಯತ್ ಚುನಾವಣೆ ಶನಿವಾರ ಹಿಂಸಾಚಾರಕ್ಕೆ ಸಾಕ್ಷಿಯಾಯಿತು. ರಾಜ್ಯದಲ್ಲಿ ಮತದಾನದ ವೇಳೆ ನಡೆದ ಹಿಂಸಾಚಾರದಲ್ಲಿ 19 ಮಂದಿ ಸಾವನ್ನಪ್ಪಿದ್ದರು. ಮತಪೆಟ್ಟಿಗೆಗಳು ಮತ್ತು ಮತಪತ್ರಗಳನ್ನು ನಾಶಪಡಿಸಿದ ಹಲವಾರು ಘಟನೆಗಳು ವರದಿಯಾಗಿದೆ. ರಾಜ್ಯ ಚುನಾವಣಾ ಆಯೋಗವು (SEC) ಜಿಲ್ಲಾಧಿಕಾರಿಗಳಿಂದ ಸಾವುಗಳು ಮತ್ತು ಹಿಂಸಾಚಾರದ ಬಗ್ಗೆ ವಿವರವಾದ ವರದಿಗಳನ್ನು ಕೇಳಿದೆ.