Tuesday, September 23, 2025

Read It | ಈ ಟೈಮ್ ನಲ್ಲಿ ನಿಮ್ಮ ದೇಹದ ತೂಕ ನೋಡೋಕೆ ಹೋಗ್ಬೇಡಿ? ಜಾಸ್ತಿನೇ ಬರುತ್ತೆ ಖಂಡಿತ

ಆರೋಗ್ಯಕರ ಜೀವನಕ್ಕಾಗಿ ಎತ್ತರಕ್ಕೆ ತಕ್ಕ ತೂಕ, ತೂಕಕ್ಕೆ ತಕ್ಕ ಎತ್ತರವನ್ನು ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯ. ತೂಕ ಹೆಚ್ಚಾದರೂ ಅಪಾಯ, ಅತಿಯಾಗಿ ಇಳಿದರೂ ಅಪಾಯವೇ ಸರಿ. ಹೀಗಾಗಿ ನಾವು ಸಮತೋಲನದಲ್ಲಿ ತೂಕವನ್ನು ನಿರ್ವಹಿಸುವುದು ಅಗತ್ಯ. ಅನೇಕರು ತೂಕ ಹೆಚ್ಚಿಸಲು ಅಥವಾ ಇಳಿಸಲು ಜಿಮ್‌ಗೆ ಹೋಗಿ ವ್ಯಾಯಾಮ ಮಾಡುತ್ತಾರೆ, ವಾಕಿಂಗ್, ಜಾಗಿಂಗ್ ಮಾಡುತ್ತಾರೆ, ಆಹಾರ ಪದ್ಧತಿಯನ್ನು ಬದಲಿಸುತ್ತಾರೆ. ಆದರೆ, ಕೆಲವರಿಗೆ ತೂಕವನ್ನು ಪರೀಕ್ಷಿಸುವ ಹುಚ್ಚು ಹೆಚ್ಚೇ ಇರುತ್ತದೆ. ಎಲ್ಲಿಯೇ ತೂಕದ ಮಷಿನ್ ಕಂಡರೂ ಅಲ್ಲಿ ತೂಕವನ್ನು ತೂಗಿ ನೋಡುತ್ತಾರೆ. ಆದರೆ ತಜ್ಞರ ಪ್ರಕಾರ, ತೂಕ ಪರೀಕ್ಷಿಸಲು ಕೂಡ ಕೆಲವು ಸರಿಯಾದ ಸಮಯಗಳಿವೆ. ತಪ್ಪು ಸಮಯದಲ್ಲಿ ತೂಕವನ್ನು ನೋಡಿದರೆ ಅದು ನಿಖರವಾದ ಅಂಕಿ-ಅಂಶ ನೀಡುವುದಿಲ್ಲ.

ಊಟ ಮಾಡಿದ ತಕ್ಷಣ
ಊಟವಾದ ತಕ್ಷಣ ಹೊಟ್ಟೆಯಲ್ಲಿ ಆಹಾರ ಮತ್ತು ನೀರು ಜೀರ್ಣವಾಗುತ್ತಿರುತ್ತದೆ. ಈ ವೇಳೆ ತೂಕ ನೋಡಿದರೆ ಅದು ಹೆಚ್ಚು ತೋರಿಸುತ್ತದೆ, ನಿಜವಾದ ದೇಹದ ತೂಕ ತಿಳಿಯುವುದಿಲ್ಲ.

ಸರಿಯಾಗಿ ನಿದ್ದೆ ಮಾಡದ ದಿನ
ನಿದ್ರಾಭಾವದಿಂದ ಹಾರ್ಮೋನಲ್ ಅಸಮತೋಲನ ಉಂಟಾಗಿ ತೂಕದಲ್ಲಿ ಏರುಪೇರಾಗುತ್ತದೆ. ಹೀಗಾಗಿ ನಿದ್ದೆ ಸರಿಯಾಗಿ ಮಾಡದ ದಿನ ತೂಕ ನೋಡಬಾರದು.

ವ್ಯಾಯಾಮ ಮಾಡಿದ ತಕ್ಷಣ
ವ್ಯಾಯಾಮದ ನಂತರ ಸ್ನಾಯುಗಳು ಉಬ್ಬಿಕೊಂಡಿರುತ್ತವೆ ಮತ್ತು ಹೆಚ್ಚು ನೀರು ಕುಡಿದಿರುವುದರಿಂದ ತೂಕದಲ್ಲಿ ಬದಲಾವಣೆ ಕಾಣಿಸುತ್ತದೆ. ಈ ಸಮಯದಲ್ಲಿ ತೂಕ ಪರೀಕ್ಷೆ ತಪ್ಪು ಫಲಿತಾಂಶ ನೀಡುತ್ತದೆ.

ಋತುಮತಿಯ ಸಮಯದಲ್ಲಿ
ಮಹಿಳೆಯರಲ್ಲಿ ಋತುಚಕ್ರದ ಸಮಯದಲ್ಲಿ ದೇಹದಲ್ಲಿ ಬದಲಾವಣೆಗಳಿಂದ ತೂಕ ಹೆಚ್ಚಾಗಿ ತೋರಿಸಬಹುದು. ಆದ್ದರಿಂದ ಈ ಸಮಯದಲ್ಲಿ ತೂಕ ಪರೀಕ್ಷೆ ಮಾಡಬಾರದು.

ರಾತ್ರಿ ತಡವಾಗಿ ಊಟ ಮಾಡಿದ ನಂತರ ಬೆಳಿಗ್ಗೆ
ರಾತ್ರಿ ತಡವಾಗಿ ಊಟ ಮಾಡಿದರೆ ಬೆಳಗ್ಗೆ ಅದು ಇನ್ನೂ ಸಂಪೂರ್ಣವಾಗಿ ಜೀರ್ಣವಾಗಿರುವುದಿಲ್ಲ. ಈ ಸಂದರ್ಭದಲ್ಲಿ ತೂಕ ಹೆಚ್ಚಾಗಿ ತೋರಿಸಬಹುದು.

ಇದನ್ನೂ ಓದಿ