ಸ್ನಾನ ದೈನಂದಿನ ಜೀವನದ ಒಂದು ಮುಖ್ಯ ಭಾಗ. ಶರೀರದ ಬೆವರು, ಜಿಗುಟುತನ ಮತ್ತು ದುರ್ವಾಸನೆಯಿಂದ ಮುಕ್ತಿ ಪಡೆಯಲು ಸೋಪ್ ಬಳಸುವುದು ಸಾಮಾನ್ಯ. ಆದರೆ ಮನೆಯಲ್ಲಿರುವ ಎಲ್ಲರೂ ಒಂದೇ ಸೋಪ್ ಬಳಸುವ ಅಭ್ಯಾಸವು ಚರ್ಮದ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂಬುದನ್ನು ಹಲವರು ಗಮನಿಸುವುದಿಲ್ಲ.
- ಒಂದೇ ಸೋಪ್ ಬಳಸುವುದರಿಂದ ಉಂಟಾಗುವ ಅಪಾಯಗಳು: ಒಂದೇ ಸೋಪ್ ಬಳಸುವುದರಿಂದ ಚರ್ಮದ ಸೋಂಕು ಹರಡುವ ಅಪಾಯ ಹೆಚ್ಚುತ್ತದೆ. ಉದಾಹರಣೆಗೆ, ಯಾರಿಗಾದರೂ ಶಿಲೀಂಧ್ರ ಸೋಂಕು ಇದ್ದರೆ, ಅದೇ ಸೋಪ್ ಇತರರಿಗೆ ಸೋಂಕು ಹರಡಲು ಕಾರಣವಾಗಬಹುದು. ಬ್ಯಾಕ್ಟೀರಿಯಾಗಳು ಸುಲಭವಾಗಿ ಮತ್ತೊಬ್ಬರ ಚರ್ಮವನ್ನು ತಲುಪಿ ಸಮಸ್ಯೆ ಉಂಟುಮಾಡುತ್ತವೆ.
- ರಾಸಾಯನಿಕ ದುಷ್ಪರಿಣಾಮ: ಪ್ರತಿ ಸೋಪಿನಲ್ಲಿಯೂ ವಿಭಿನ್ನ ರಾಸಾಯನಿಕಗಳು ಮತ್ತು ಸುಗಂಧ ದ್ರವ್ಯಗಳು ಇರುತ್ತವೆ. ಇವು ಎಲ್ಲರ ಚರ್ಮಕ್ಕೂ ಸೂಕ್ತವಲ್ಲ. ಬೇರೆವರ ಚರ್ಮದ ಪ್ರಕಾರಕ್ಕೆ ಹೊಂದಿಕೊಂಡ ಸೋಪ್ ಬಳಸಿದರೆ, ನಿಮ್ಮ ಚರ್ಮದ pH ಸಮತೋಲನ ಹಾಳಾಗಬಹುದು. ಇದರಿಂದ ಚರ್ಮವು ಒಣಗುವುದು, ಅಲರ್ಜಿ ಅಥವಾ ಅತಿಸೂಕ್ಷ್ಮ ಸಮಸ್ಯೆಗಳಿಗೆ ಕಾರಣವಾಗಬಹುದು.
- ನೈರ್ಮಲ್ಯದ ಕೊರತೆ: ಒಂದೇ ಸೋಪನ್ನು ಹಲವರು ಬಳಸಿದರೆ, ಅದರ ಮೇಲ್ಮೈಯಲ್ಲಿ ಬ್ಯಾಕ್ಟೀರಿಯಾ ಮತ್ತು ಅತಿ ಸೂಕ್ಷ್ಮ ಕಣಗಳು ಸೇರುತ್ತವೆ. ಇದು ಮುಂದಿನ ವ್ಯಕ್ತಿ ಬಳಸುವಾಗ ಚರ್ಮದ ಸೋಂಕುಗಳಿಗೆ ನೇರ ದಾರಿಯಾಗುತ್ತದೆ.
- ಉತ್ತಮ ಪರ್ಯಾಯ: ಒಂದೇ ಸೋಪನ್ನು ಬಳಸುವುದನ್ನು ತಪ್ಪಿಸಲು ಲಿಕ್ವಿಡ್ ಬಾಡಿ ವಾಶ್ ಉತ್ತಮ ಪರ್ಯಾಯ. ಇದು ವೈಯಕ್ತಿಕ ಬಳಕೆಗೆ ಅನುಕೂಲಕರವಾಗಿದ್ದು, ಹೈಜೀನ್ ಕಾಪಾಡುತ್ತದೆ. ಅಥವಾ ಪ್ರತಿಯೊಬ್ಬರೂ ತಮ್ಮದೇ ಆದ ಸೋಪ್ ಬಳಸುವುದು ಆರೋಗ್ಯಕರ ವಿಧಾನ. ವಿಶೇಷವಾಗಿ ಚರ್ಮದ ಪ್ರಕಾರಕ್ಕೆ ಅನುಗುಣವಾದ ಸೋಪ್ ಆಯ್ಕೆ ಮಾಡಿದರೆ ಹೆಚ್ಚು ಸುರಕ್ಷತೆ ಸಿಗುತ್ತದೆ.