ತೂಕ ಇಳಿಸಿಕೊಳ್ಳಲು ನೀವು ಹೆಚ್ಚು ವ್ಯಾಯಾಮ ಮಾಡುತ್ತೀರಾ? ಎಷ್ಟೇ ವ್ಯಾಯಾಮ ಮಾಡಿದರೂ ತೂಕ ಇಳಿಕೆ ಆಗ್ತಿಲ್ವಾ? ನೀವು ಗೊಂದಲಕ್ಕೊಳಗಾಗಿದ್ದರೆ ಮತ್ತು ವ್ಯಾಯಾಮವು ತೂಕವನ್ನು ಕಳೆದುಕೊಳ್ಳುವ ಬದಲು ತೂಕವನ್ನು ಹೆಚ್ಚಿಸುತ್ತದೆ ಎಂದು ನೀವು ಭಾವಿಸಿದರೆ, ನೀವು ತಪ್ಪು ಮಾಡುತ್ತಿದ್ದೀರಿ ಎಂದರ್ಥ.
ಜನರು ವ್ಯಾಯಾಮ ಮಾಡಲು ಶುರುಮಾಡಿದ ಆರಂಭಿಕ ದಿನಗಳಲ್ಲಿ ತೂಕ ಮತ್ತಷ್ಟು ಜಾಸ್ತಿಯಾಗುತ್ತದೆ. ಆರಂಭಿಕ ದಿನಗಳಲ್ಲಿ ವ್ಯಾಯಾಮ ಮಾಡಿದಾಗ ಬರ್ನ್ ಆದ ಕ್ಯಾಲೋರಿಯಷ್ಟು ತೂಕ ಇಳಿಯೋದಿಲ್ಲ.
ವ್ಯಾಯಾಮ ಮಾಡುವುದರಿಂದ ಹಸಿವು ಹೆಚ್ಚಾಗುತ್ತದೆ. ತಿನ್ನುವ ಪ್ರಮಾಣ ಜಾಸ್ತಿಯಾಗುತ್ತದೆ. ಒಮ್ಮೆ ವ್ಯಾಯಾಮ ಮಾಡಿ ಕ್ಯಾಲೋರಿ ಬರ್ನ್ ಮಾಡಿ ಹೊಟ್ಟೆ ತುಂಬಾ ಆಹಾರ ಸೇವನೆ ಮಾಡಿ ಕುಳಿತಲ್ಲಿಯೇ ಕೆಲಸ ಮಾಡುವುದು ಕೂಡ ತೂಕ ಏರಲು ಕಾರಣ.
ವ್ಯಾಯಾಮ ಮಾಡಿದ್ರೆ ಮಾತ್ರ ಸಾಲದು ದಿನದಲ್ಲಿ ನೀವು ಎಷ್ಟು ಓಡಾಡ್ತೀರಾ ಎಂಬುದು ಮುಖ್ಯ. ಹಾಗೆ ನೀವು ಸೇವಿಸುವ ಆಹಾರದಲ್ಲಿ ಹೆಚ್ಚು ಕ್ಯಾಲೋರಿ ಇದ್ದಲ್ಲಿ ಅದು ಕೂಡ ನಿಮ್ಮ ತೂಕ ಹೆಚ್ಚಿಸುತ್ತದೆ.