ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದ್ದು, ವಾಶಿಂಗ್ಟನ್ ಡಿಸಿಗೆ ಆಗಮಿಸಿದ ಮೋದಿಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಬರ ಮಾಡಿಕೊಂಡಿದ್ದರು.
ಇದೀಗ ಜೋ ಬೈಡನ್, ಜಿಲ್ ಬೈಡನ್, ಶ್ವೇತಭವನದ ಆತ್ಮಿಯ ಆತಿಥ್ಯಕ್ಕೆ ಪ್ರಧಾನಿ ಮೋದಿ ಧನ್ಯವಾದ ಹೇಳಿದ್ದಾರೆ.
ವಾಶಿಂಗ್ಟನ್ ಡಿಸಿಗೆ ಆಗಮಿಸಿದ ಮೋದಿ, ಜೋ ಬೈಡನ್ ಹಾಗೂ ಜಿಲ್ ಬೈಡನ್ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಕೆಲ ಗಣ್ಯರು ಪಾಲ್ಗೊಂಡಿದ್ದರು. ಭೋಜನದ ಬಳಿಕ ಭಾರತೀಯ ಸಾಂಪ್ರದಾಯಿಕ ನೃತ್ಯ ಪ್ರಕಾರಗಳನ್ನು ಸವಿ ಆನಂದಿಸಿದರು. ಶ್ವೇತಭವನದಲ್ಲಿ ಮೋದಿ ಹಾಗೂ ಬೈಡೆನ್ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.
ಮೋದಿ ಹಾಗೂ ಅಮೇರಿಕದ ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರು ವಾಷಿಂಗ್ಟನ್ ಡಿಸಿ ಯ ರಾಷ್ಟ್ರೀಯ ವಿಜ್ಞಾನ ಕೇಂದ್ರದಲ್ಲಿ ಭಾರತ ಮತ್ತು ಯುಎಸ್ಎ ಭವಿಷ್ಯಕ್ಕಾಗಿ ಕೌಶಲ್ಯ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.