ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಪದಾರ್ಥ:
ಸಣ್ಣಗೆ ಹೆಚ್ಚಿದ ಹಾಗಲಕಾಯಿ ಎರಡು ಕಪ್, ತೆಂಗಿನ ತುರಿ ಅರ್ಧಕಪ್, ಹಸಿಮೆಣಸಿನ ಕಾಯಿ ನಾಲ್ಕು, ಶುದ್ಧ ಅರಶಿನ ಒಂದು ಟೀಸ್ಪೂನ್, ಮೆಣಸಿನ ಪುಡಿ ಒಂದು ಟೀ ಸ್ಪೂನ್, ಶುದ್ಧ ಕೊಬ್ಬರಿ ಎಣ್ಣೆ, ಉಪ್ಪು, ಸ್ವಲ್ಪ ಹುಣಸೆಹುಳಿ.
ಮಾಡುವ ವಿಧಾನ:
ಹಾಗಲಕಾಯಿ ಚೂರು, ಮೆಣಸಿನ ಹುಡಿ, ತೆಂಗಿನ ತುರಿ, ಅರಶಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಮಾಡಿಟ್ಟುಕೊಳ್ಳಿ. ಬಾಣಲೆಯನ್ನು ಸಣ್ಣ ಉರಿಯಲ್ಲಿಟ್ಟು ಕಾಯಿಸಿ. ತೆಂಗಿನೆಣ್ಣೆ ಹಾಕಿ ಬಿಸಿಮಾಡಿಕೊಳ್ಳಿ. ಮಿಶ್ರಮಾಡಿದ ಹಾಗಲಕಾಯಿಯನ್ನು ಎಣ್ಣೆಯಲ್ಲಿ ಹುರಿಯಿರಿ. ಕೆಂಪುಬಣ್ಣಕ್ಕೆ ಬಂದಕೂಡಲೇ ಪ್ರತ್ಯೇಕ ಪಾತ್ರೆಗೆ ವರ್ಗಾಯಿಸಿ. ತುಪ್ಪದನ್ನದೊಂದಿಗೆ ಸವಿಯಲು ಬಲುರುಚಿ.