ಹೊಸದಿಗಂತ ಡಿಜಿಟಲ್ ಡೆಸ್ಕ್:
ಪವಿತ್ರ ಚಾರ್ಧಾಮ್ ಯಾತ್ರೆಗೆ ಆನ್ಲೈನ್ ನೋಂದಣಿ ಆರಂಭವಾಗಿದ್ದು, ಒಂದೇ ದಿನ ದಾಖಲೆ ಮಟ್ಟದ ನೋಂದಣಿ ನಡೆದಿದೆ.
ಉತ್ತರಾಖಂಡದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಹಾಗೂ ಬದರಿನಾಥಗಳನ್ನು ಒಟ್ಟಾಗಿ ಚಾರ್ ಧಾಮ್ ಯಾತ್ರೆ ಎಂದು ಕರೆಯಲಾಗುತ್ತದೆ. ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಇದು ಪ್ರಮುಖವಾಗಿದೆ.
ವರ್ಷದಲ್ಲಿ ಎರಡು ಬಾರಿ ಮಾತ್ರ ಈ ಯಾತ್ರೆಯನ್ನು ನಡೆಸಲಾಗುತ್ತದೆ. ಈ ಬಾರಿಯ ಬೇಸಿಗೆಯ ಯಾತ್ರೆ ಏಪ್ರಿಲ್ 30ರಿಂದ ಪ್ರಾರಂಭವಾಗಲಿದ್ದು, ಮಾರ್ಚ್ 20ರಿಂದ ಆನ್ಲೈನ್ ನೋಂದಣಿ ನಡೆಯುತ್ತಿದೆ. ಮೊದಲ ದಿನವೇ 1,65,292 ಭಕ್ತರು ಹೆಸರು ನೋಂದಾಯಿಸುವ ಮೂಲಕ ಕಳೆದ ವರ್ಷದ ದಾಖಲೆ ಮುರಿದಿದ್ದಾರೆ.
ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನೋಂದಣಿ ನಡೆಯುತ್ತಿದೆ. ಕಳೆದ ವರ್ಷ ಮೊದಲ ದಿನ 1.50 ಲಕ್ಷ ನೋಂದಣಿಯಾಗಿತ್ತು. ನಾಲ್ಕು ಧಾಮದಲ್ಲಿ ಅತಿ ಹೆಚ್ಚು ಭಕ್ತರು ಕೇದಾರ್ನಾಥ್ಗೆ ನೋಂದಣಿ ಮಾಡಿದ್ದಾರೆ.