ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿನನಿತ್ಯ ಜನ ಬಳಸುವ ವಸ್ತುಗಳ ಮೇಲಿನ ಜಿಎಸ್‌ಟಿ ದರಗಳು ವ್ಯಾಪಾರಕ್ಕೂ ಗ್ರಾಹಕರಿಗೂ ದೊಡ್ಡ ಹೊರೆ ಆಗುತ್ತಿವೆ ಎಂದು ಸಣ್ಣ ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಈ ತೆರಿಗೆ ಭಾರವನ್ನು ಇಳಿಸಬೇಕು ಎಂದು ಸಣ್ಣ ಉದ್ದಿಮೆದಾರರು ಆಶಿಸುತ್ತಿದ್ದಾರೆ.
ಅಗತ್ಯ ಸರಕುಗಳ ಬೆಲೆ ಆಗಾಗ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಅವುಗಳನ್ನು ಖರೀದಿ ಮಾಡಿ ಸಂಗ್ರಹಿಸುವುದೇ ಸವಾಲಾಗಿ ಪರಿಣಮಿಸಿದೆ. ಇದರ ಪರಿಣಾಮವಾಗಿ ಲಾಭದ ಪ್ರಮಾಣ ಕುಸಿಯುತ್ತಿದ್ದು, ಮಾರುಕಟ್ಟೆಯಲ್ಲಿ ವಹಿವಾಟು ಮಂದಗತಿಯತ್ತ ಸಾಗುತ್ತಿದೆ.
ಇದನ್ನೂ ಓದಿ:
ಹಾಲು, ಸಕ್ಕರೆ, ಡೈರಿ ಉತ್ಪನ್ನಗಳು ಸೇರಿದಂತೆ ಮೂಲಭೂತ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಇರೋದೇ ಗ್ರಾಹಕರ ಖರೀದಿ ಶಕ್ತಿಯನ್ನು ಕಡಿಮೆ ಮಾಡುತ್ತಿದೆ. ಈ ತೆರಿಗೆ ಕಡಿಮೆಯಾದರೆ ವ್ಯಾಪಾರ ಚೆನ್ನಾಗಿ ಆಗುತ್ತದೆ, ಜನಸಾಮಾನ್ಯರಿಗೂ ನೇರ ಲಾಭವಾಗುತ್ತದೆ.
ಇತ್ತೀಚೆಗೆ ಸರ್ಕಾರ ಜಿಎಸ್‌ಟಿ ವ್ಯವಸ್ಥೆಯನ್ನು ಸರಳಗೊಳಿಸಿ ದರಗಳ ಸಂಖ್ಯೆಯನ್ನು ಕಡಿಮೆ ಮಾಡಿದರೂ, ನೆಲಮಟ್ಟದಲ್ಲಿ ಸಮಸ್ಯೆಗಳು ಮುಂದುವರಿದಿವೆ ಎನ್ನುವುದು ವ್ಯಾಪಾರಿಗಳ ವಾದ. ಎಲ್ಲಾ ಸರಕುಗಳಿಗೆ ಕನಿಷ್ಠ ಹಾಗೂ ಸಮಾನ ಜಿಎಸ್‌ಟಿ ದರ ಜಾರಿಯಾಗಬೇಕೆಂಬ ಕೂಗು ಕೂಡ ಜೋರಾಗಿದೆ.



