ಆದಿತ್ಯ ಧರ್ ನಿರ್ದೇಶನದ ಧುರಂಧರ್ 2 ಚಿತ್ರ ಈಗ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಭಾರತದಲ್ಲಿ ಸಾವಿರ ಕೋಟಿ ರೂಪಾಯಿಗಳ ಕ್ಲಬ್ ಸೇರಿದ ಈ ಸಿನಿಮಾ, ಅಧಿಕೃತವಾಗಿ ಬಿಡುಗಡೆಯಾಗದಿದ್ದರೂ ಪಾಕಿಸ್ತಾನದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಆದರೆ ಇಲ್ಲಿನ ವಿಶೇಷವೆಂದರೆ, ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಕರಾಚಿಯ ಲಿಯಾರಿ ಭಾಗದ ಜನರು ಚಿತ್ರತಂಡದ ಮುಂದೆ ವಿಚಿತ್ರ ಬೇಡಿಕೆಯಿಟ್ಟು ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ!
ಈ ಸಿನಿಮಾದ ಕಥೆ ಕರಾಚಿಯ ಲಿಯಾರಿಯಲ್ಲಿ ನಡೆದ ಗ್ಯಾಂಗ್‌ವಾರ್, ಅಲ್ಲಿನ ಕ್ರಿಮಿನಲ್‌ಗಳು ಮತ್ತು ಐಎಸ್‌ಐ (ISI) ನಡುವಿನ ನಂಟಿನ ಸುತ್ತ ಸಾಗುತ್ತದೆ. ಇದನ್ನು ಕಾಳಸಂತೆಯಲ್ಲಿ ವೀಕ್ಷಿಸಿರುವ ಲಿಯಾರಿ ನಿವಾಸಿಗಳು ಈಗ ವಿತಂಡವಾದಕ್ಕಿಳಿದಿದ್ದಾರೆ:
“ನಮ್ಮ ಜೀವನದ ಕಥೆ ಇಟ್ಟುಕೊಂಡು ಸಾವಿರ ಕೋಟಿ ಕಲೆಕ್ಷನ್ ಮಾಡಿದ್ದೀರಿ, ಅದರಲ್ಲಿ ನಮಗೆ 500 ಕೋಟಿ ರೂಪಾಯಿ ಪಾಲು ನೀಡಿ” ಎಂದು ಕೇಳಿದ್ದಾರೆ.
“ನಮ್ಮ ಏರಿಯಾದಲ್ಲಿ ರಸ್ತೆಗಳು ಸರಿಯಿಲ್ಲ, ಮಕ್ಕಳಿಗೆ ಓಡಾಡಲು ತೊಂದರೆಯಾಗುತ್ತಿದೆ. ನೀವು ಹಣ ಕೊಟ್ಟರೆ ನಾವು ರಸ್ತೆ ಮತ್ತು ಮೂಲಸೌಕರ್ಯ ಸರಿಪಡಿಸಿಕೊಳ್ಳುತ್ತೇವೆ” ಎಂಬುದು ಅವರ ವಾದ.
ಸಿನಿಮಾ ತೋರಿಸಿದ್ದಕ್ಕೆ ಧನ್ಯವಾದ ಹೇಳುವ ಬದಲು, ಲಾಭದಲ್ಲಿ ಅರ್ಧ ಭಾಗ ಕೇಳುತ್ತಿರುವ ಲಿಯಾರಿ ಜನರ ಈ ‘ವೆರೈಟಿ’ ಬೇಡಿಕೆ ಕಂಡು ನೆಟ್ಟಿಗರು ನಗೆಗಡಲಲ್ಲಿ ತೇಲುತ್ತಿದ್ದಾರೆ.



