October 10, 2026
Saturday, October 10, 2026
spot_img

ಧಾರವಾಹಿ ಶೂಟಿಂಗ್ ವೇಳೆ ದುರಂತ ಅಂತ್ಯಕಂಡ ಬಂಗಾಳಿ ಜನಪ್ರಿಯ ನಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶೂಟಿಂಗ್ ನಡುವೆ ನಡೆದ ಅವಘಡದಲ್ಲಿ ಬಂಗಾಳಿ ಜನಪ್ರಿಯ ನಟ ರಾಹುಲ್ ಬ್ಯಾನರ್ಜಿ ದುರಂತ ಅಂತ್ಯಕಂಡಿದ್ದಾರೆ.

ಒಡಿಶಾದ ತಲ್ಸರಿ ಬೀಚ್‌ನಲ್ಲಿ ಬೋಟ್ ಮೇಲೆ ನಿಂತು ಭೋಲೆ ಬಾಬಾ ಪಾರ್ ಕರೆಗಾ ಧಾರವಾಹಿ ಶೂಟಿಂಗ್ ವೇಳೆ ರಾಹುಲ್ ಬ್ಯಾನರ್ಜಿ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದಾರೆ. ತಕ್ಷಣ ರಕ್ಷಣಾ ತಂಡ ರಾಹುಲ್ ಬ್ಯಾನರ್ಜಿ ರಕ್ಷಿಸಿ ಆಸ್ಪತ್ರೆ ದಾಖಲಿಸಿದರೂ,ಬದುಕುಳಿಯಲಿಲ್ಲ.

ಸೀನ್‌ಗಳ ಚಿತ್ರೀಕರಣದ ನಡುವೆ ಸಣ್ಣ ವಿರಾಮ ನೀಡಲಾಗಿತ್ತು. ಈ ವೇಳೆ ರಾಹುಲ್ ಬ್ಯಾನರ್ಜಿ ಬೋಟ್ ಬದಿಯಲ್ಲಿ ಒಂದೆರೆಡು ಹೆಜ್ಜೆ ಹಾಕಿ ಮುಂದಿನ ಸೀನ್‌ಗೆ ತಯಾರಿ ನಡೆಸುತ್ತಿದ್ದರು. ಸಿಬ್ಬಂದಿಗಳು, ಕ್ಯಾಮೆರಾಮ್ಯಾನ್, ನಿರ್ದೇಶಕರು ಮುಂದಿನ ಸೀನ್ ಚಿತ್ರೀಕರಣಕ್ಕೆ ಹೊರಟಾಗ ರಾಹುಲ್ ಬೋಟ್ ಮೇಲೆ ಕಾಣಿಸಲಿಲ್ಲ. ತಕ್ಷಣವೇ ರಕ್ಷಣಾ ತಂಡದ ಸಿಬ್ಬಂದಿಗಳು ಸಮುದ್ರಕ್ಕೆ ಹಾಕಿ ರಾಹುಲ್ ಬ್ಯಾನರ್ಜಿಯನ್ನು ಮೇಲಕ್ಕೆ ಎಳೆದು ಆಸ್ಪತ್ರೆ ದಾಖಲಿಸಲಾಗಿದೆ. ಆದರೆ ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.

ಇತ್ತ ಟೆಲಿವಿಶನ್ ರಂಗವೇ ಆಘಾತಗೊಂಡಿದೆ. ಪ್ರತಿಭಾವಂತ ನಟನ ದುರಂತ ಅಂತ್ಯ ಅರಗಿಸಿಕೊಳ್ಳಲು ಸಾಧ್ಯವಾಗದೇ ಕಣ್ಣೀರಿಟ್ಟಿದ್ದಾರೆ.

Must Read