ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ರೀಲ್ಸ್ ಚಟ ಯುವಕರಲ್ಲಿ ಹೆಚ್ಚಾಗ್ತಿದೆ. ಇದೀಗ ಅಂತದ್ದೇ ಒಂದು ಘಟನೆ ನಡೆದಿದೆ, ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಭದ್ರಾ ನದಿಗೆ ಹಾರಿ ಯುವಕ ಹುಚ್ಚಾಟ ಮೆರೆದಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಬಳಿ ನಡೆದಿದೆ.
ಕೇವಲ ಒಂದು ರಿಲ್ಸ್‌ಗಾಗಿ ಯುವಕ ಕಂಪ್ಲಿ ಸೇತುವೆಯಿಂದ ತುಂಗಭದ್ರಾ ನದಿಗೆ ಹಾರಿದ್ದಾನೆ. ಈಗಾಗಲೇ ಅಧಿಕಾರಿಗಳು ಅಪಾಯದ ಮುನ್ಸೂಚನೆ ನೀಡಿದ್ದಾರೆ. ಅಪಾಯದ ಅರಿವಿದ್ದರೂ ಸೇತುವೆ ಮೇಲಿನಿಂದ ಜಿಗಿದಿದ್ದಾನೆ. ರೀಲ್ಸ್‌ಗಾಗಿ ತುಂಗಭದ್ರಾ ನದಿಗೆ ಹಾರಿದ ಯುವಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.