ಹೊಸದಿಗಂತ ಡಿಜಿಟಲ್ ಡೆಸ್ಕ್
ಒಂದೆಡೆ ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತು ಹಾಕಿರುವ ಮಾಹಿತಿಗೆ ಸಂಬಂಧಿಸಿ ಕಾರ್ಯಾಚರಣೆ ಚುರುಕುಗೊಂಡಿರುವ ಬೆನ್ನಿಗೇ ಇನ್ನೊಂದೆಡೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮುಂಭಾಗದಲ್ಲಿಯೇ ‘ರೀಲ್ಸ್’ ಮಾಡಲು ಹೋಗಿ ಕೆಲವು ಯುವಕರು ಸಾರ್ವಜನಿಕರಿಂದ ತರಾಟೆಗೊಳಗಾಗಿ ಪೊಲೀಸ್ ಆತಿಥ್ಯ ಪಡೆದಿದ್ದಾರೆ.
ಸೋಮವಾರ ಒಂದಿಷ್ಟು ಯುವಕರು ದೇವಸ್ಥಾನದ ಮುಂದೆಯೇ ಮೊಬೈಲ್ ಹಿಡಿದುಕೊಂಡು ರೀಲ್ಸ್ ಮಾಡುವ ಹುಚ್ಚಾಟದಲ್ಲಿ ತೊಡಗಿದ್ದರು. ಇದನ್ನು ಕಂಡ ಗ್ರಾಮಸ್ಥರು ಅವರನ್ನು ಸ್ಥಳದಲ್ಲಿಯೇ ತರಾಟೆಗೆತ್ತಿಕೊಂಡು ಪೋಲಿಸ್ ಠಾಣೆಗೆ ಒಪ್ಪಿಸಿದ್ದಾರೆ.