ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಸ್ ಡ್ರೈವರ್ ಒಬ್ಬರು ಡ್ರೈವಿಂಗ್ ಮಾಡುವ ವೇಳೆ ಒಂದು ಕೈಯಲ್ಲಿ ರೀಲ್ಸ್ ನೋಡುತ್ತಾ, ಮತ್ತೊಂದು ಕೈಯಲ್ಲಿ ಸ್ಟೇರಿಂಗ್ ಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ.
ಡ್ರೈವರ್ನ ಸ್ಕಿಲ್ಸ್ನ್ನು ನಂಬಿ ಅದೆಷ್ಟೋ ಮಂದಿ ಬಸ್ನಲ್ಲಿ ನೆಮ್ಮದಿಯಿಂದ ಕುಳಿತಿರುತ್ತಾರೆ. ಆದರೆ ಚಾಲಕರ ಅಜಾಗರೂಕತೆಯಿಂದಾಗಿ ಅಪಘಾತಗಳು ಸಂಭವಿಸುತ್ತವೆ. ಡ್ರೈವರ್ನ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಈ ರೀತಿ ನಡೆ ತಪ್ಪು, ಡ್ರೈವರ್ಗಳು ಕೆಲಸಕ್ಕೆ ಬರುವಾಗ ಬರೀ ಬೇಸಿಕ್ ಸೆಟ್ ಮೊಬೈಲ್ ಬಳಕೆ ಮಾಡುವಂತೆ ರೂಲ್ಸ್ ಮಾಡಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಸರ್ಕಾರಿ ಬಸ್ ಚಾಲಕ ಹತ್ತಾರು ಪ್ರಯಾಣಿಕರ ಜೀವ ಕೈಯಲ್ಲಿಟ್ಟುಕೊಂಡು ಮೊಬೈಲ್ನಲ್ಲಿ ರೀಲ್ಸ್ ನೋಡುತ್ತಾ ಬಸ್ ಚಲಾಯಿಸಿದ್ದಾನೆ. ತನ್ನ ಕೈಯಲ್ಲಿ ಪ್ರಯಾಣಿಕರ ಜೀವವಿದೆ ಎಂಬುದನ್ನು ಮರೆತು ಮೊಬೈಲ್ನಲ್ಲಿ ಮುಳುಗಿದ್ದ ಬಸ್ ಚಾಲಕನ ನಿರ್ಲಕ್ಷ್ಯದಿಂದ ಪ್ರಯಾಣಿಕರು ರೋಸಿ ಹೋಗಿದ್ದಾರೆ. ಈ ಹಿನ್ನೆಲೆ ಪ್ರಯಾಣಿಕರೊಬ್ಬರು ಚಾಲಕನ ನಿರ್ಲಕ್ಷ್ಯವನ್ನು ಮೊಬೈಲ್ನಲ್ಲಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಕೋಲಾರದಿಂದ ಪಾವಗಡ ಮಾರ್ಗದ ಬಸ್ ಚಾಲಕ ಈ ರೀತಿಯ ನಿರ್ಲಕ್ಷ್ಯ ತೋರಿದ್ದಾನೆ. ಇನ್ನು ಚಾಲಕನ ನಿರ್ಲಕ್ಷ್ಯದ ವಿರುದ್ಧ ಪ್ರಯಾಣಿಕರು ಕ್ರಮಕ್ಕೆ ಆಗ್ರಹಿಸಿದ್ದಾರೆ.