Thursday, January 29, 2026
Thursday, January 29, 2026
spot_img

ಸುಧಾರಣೆ, ಕಾರ್ಯಕ್ಷಮತೆ, ಬದಲಾವಣೆ ನಮ್ಮ ಸರ್ಕಾರದ ಜೀವಾಳ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಚಾಲನೆ ಸಿಕ್ಕಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವ ಮೂಲಕ ದೇಶದ ಅಭಿವೃದ್ಧಿಯ ದಿಕ್ಸೂಚಿಯನ್ನು ಬಿಚ್ಚಿಟ್ಟಿದ್ದಾರೆ.

“ಸುಧಾರಣೆ, ಕಾರ್ಯಕ್ಷಮತೆ ಮತ್ತು ಬದಲಾವಣೆ” ಎಂಬುದು ನಮ್ಮ ಸರ್ಕಾರದ ಮೂಲ ಮಂತ್ರ ಎಂದು ಬಣ್ಣಿಸಿದ ಪ್ರಧಾನಿ, ಭಾರತವೀಗ ವೇಗವಾಗಿ ಚಲಿಸುತ್ತಿರುವ ‘ಸುಧಾರಣಾ ಎಕ್ಸ್‌ಪ್ರೆಸ್’ನಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಷ್ಟ್ರಪತಿಗಳ ಭಾಷಣವನ್ನು ಉಲ್ಲೇಖಿಸಿದ ಅವರು, ಅದು ಕೇವಲ ಭಾಷಣವಲ್ಲ, ಬದಲಿಗೆ 140 ಕೋಟಿ ಭಾರತೀಯರ ಆತ್ಮವಿಶ್ವಾಸ ಮತ್ತು ಯುವಶಕ್ತಿಯ ಆಕಾಂಕ್ಷೆಗಳ ಪ್ರತಿಬಿಂಬವಾಗಿದೆ ಎಂದು ಹೇಳಿದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ ‘ಆರ್ಥಿಕ ಸಮೀಕ್ಷೆ’ಯನ್ನು ಮಂಡಿಸಲಿದ್ದಾರೆ. ಇದು ಕಳೆದ ಒಂದು ವರ್ಷದ ದೇಶದ ಆರ್ಥಿಕ ಸ್ಥಿತಿಗತಿಯ ಸಮಗ್ರ ಚಿತ್ರಣವನ್ನು ನೀಡಲಿದ್ದು, ಮುಂಬರುವ ಬಜೆಟ್‌ಗೆ ಭದ್ರ ಬುನಾದಿಯಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !