ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕೇಂದ್ರ ಸರಕಾರ ಲೀವ್ ಇನ್ ರಿಲೇಷನ್‌ಶಿಪ್ ಅರ್ಜಿ (Live-in relationships) ಸಂಬಂಧಿಸಿದಂತೆ ಅಧಿಕೃತವಾಗಿ ನೋಂದಾಯಿಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಲೀವ್ ಇನ್ ರಿಲೇಷನ್‌ಶಿಪ್ ನೋಂದಣಿಗೂ ಕೇಂದ್ರಕ್ಕೂ ಏನು ಸಂಬಂಧ? ಇದು ಯಾವ ರೀತಿಯ ಕಲ್ಪನೆ? ಈ ರೀತಿಯ ಅರ್ಜಿಗಳನ್ನು ಸಲ್ಲಿಸುವ ಅರ್ಜಿದಾರರ ಮೇಲೆ ಈ ನ್ಯಾಯಾಲಯವು ದಂಡವನ್ನು ವಿಧಿಸಬೇಕು ಎಂದು ಈ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದೂ ಪೀಠವು ಹೇಳಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪರ್ದಿವಾಲಾ ಅವರನ್ನು ಒಳಗೊಂಡ ಪೀಠವು ವಿಚಾರಣೆಯನ್ನು ನಡೆಸಿತ್ತು.
ಅತ್ಯಾಚಾರ ಮತ್ತು ಕೊಲೆಯಂತಹ ಅಪರಾಧಗಳ ಹೆಚ್ಚಳವನ್ನು ಉಲ್ಲೇಖಿಸಿ, ವಕೀಲ ಮಮತಾ ರಾಣಿ ಅವರು ಲೀವ್ ಇನ್ ರಿಲೇಷನ್‌ಶಿಪ್ ನೋಂದಣಿಗೆ ನಿಯಮಗಳನ್ನು ರೂಪಿಸಲು ಕೇಂದ್ರಕ್ಕೆ ನಿರ್ದೇಶನವನ್ನು ಕೋರಿ ಮನವಿ ಸಲ್ಲಿಸಿದರು.
ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ, ಅರ್ಜಿದಾರರಾದ ವಕೀಲೆ ಮಮತಾ ರಾಣಿ ಅವರನ್ನು ಪ್ರಶ್ನಿಸಿದ್ದಾರೆ. ನೀವು ಇಂತಹ ಸಂಬಂಧಗಳಿಗೆ ರಕ್ಷಣೆ ನೀಡಬೇಕು ಎಂದು ಬಯಸುತ್ತೀರಾ ಅಥವಾ ಅವರು ಲಿವ್ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿ ಬರಬಾರದು ಎಂದು ಬಯಸುತ್ತಾರೆ. ಅವರ ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು ಅರ್ಜಿದಾರರು ಈ ಸಂಬಂಧವನ್ನು ನೋಂದಾಯಿಸಬೇಕೆಂದು ಬಯಸುತ್ತಾರೆ ಎಂದು ವಕೀಲರು ಉತ್ತರಿಸಿದರು.