ಈಗಿನ ಜನಾಂಗದ ಪ್ರೇಮ ಸಂಬಂಧಗಳು ತುಂಬಾ ಬದಲಾಗಿದೆ. “ಲವ್”, “ಬ್ರೇಕಪ್ “, “ಸೆಚುಯೇಷನ್‌ಶಿಪ್” ಮೊದಲಾದ ಪದಗಳು ಸಾಮಾನ್ಯವಾಗಿದ್ದು, ಈಗ “ಮೈಕ್ರೋ ಚೀಟಿಂಗ್” ಎಂಬ ಹೊಸ ಪದ ಕೂಡ ಲವ್ ಲೈಫ್‌ನಲ್ಲಿ ಟ್ರೆಂಡ್ ಆಗಿದೆ.
‘ಮೈಕ್ರೋ ಚೀಟಿಂಗ್’ ನೇರ ಮೋಸದಷ್ಟೇ ಗಂಭೀರವಾಗದಿದ್ದರೂ, ವಿಶ್ವಾಸಕ್ಕೆ ಪೆಟ್ಟು ಕೊಡಬಲ್ಲದು. ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಸಿಂಗಲ್ನಂತೆ ಇರುವುದು ಕೂಡಾ ಮೈಕ್ರೋ ಚೀಟಿಂಗ್. ನಿಮಗೆ ಲವರ್ ಇದ್ದರೆ ಅದನ್ನು ಹೇಳುವುದು ಇಬ್ಬರಿಗೂ ಇಷ್ಟವಿದ್ದರೆ ಅದನ್ನು ಬಹಿರಂಗಪಡಿಸಬಹುದು. ಆದರೆ ಉದ್ದೇಶಪೂರ್ವಕವಾಗಿ ಇದನ್ನು ಹೈಡ್ ಮಾಡುವುದು ಮೈಕ್ರೋ ಚೀಟಿಂಗ್ ಆಗಿದೆ.
ಮೈಕ್ರೋ ಚೀಟಿಂಗ್ ಪ್ರಮುಖ ಲಕ್ಷಣಗಳು:
- ಸೀಕ್ರೆಟ್ ಮೆಸೇಜಿಂಗ್:
ತಮ್ಮ ಸಂಗಾತಿಗೆ ತಿಳಿಯದಂತೆ ಮತ್ತೊಬ್ಬರೊಂದಿಗೆ ಖಾಸಗಿ ಚಾಟ್‌ಗಳಲ್ಲಿ ತೊಡಗುವುದು. - ಮೆಸೇಜು ಡಿಲೀಟ್ ಮಾಡುವ ಭ್ರಮೆ:
ಯಾವುದೇ ಸಂವಾದದ ನಂತರ ಮೆಸೇಜುಗಳನ್ನು ದಿಢೀರ್ ಆಗಿ ಅಳಿಸುವುದು - ಮೂರನೇ ವ್ಯಕ್ತಿಗೆ ಸಂಬಂಧದ ವಿಚಾರಗಳನ್ನು ಹಂಚಿಕೊಳ್ಳುವುದು:
ಪರಸ್ಪರ ಜಗಳಗಳ ವಿಚಾರವನ್ನು ನಿರಂತರವಾಗಿ ಬೇರೆಯವರಿಗೆ ಹೇಳುವುದು. - ಮಾಜಿ ಪ್ರೇಮಿಗಳೊಂದಿಗೆ ಸಂಪರ್ಕದಲ್ಲಿ ಇರುವುದು:
ನಿಮ್ಮ ಎಕ್ಸ್ ಜೊತೆ ನಿರಂತರ ಸಂಪರ್ಕ ಇಟ್ಟುಕೊಳ್ಳುವುದು. - ಮಿತಿಮೀರಿದ ಸ್ನೇಹ:
ಸಾಧಾರಣ ಸ್ನೇಹಕ್ಕಿಂತ ಹೆಚ್ಚು ಶಾರೀರಿಕ ನಿಕಟತೆ ತೋರಿಸುವುದು. - ಎಲ್ಲರನ್ನು ಇಂಪ್ರೆಸ್ ಮಾಡಲು ಚಟ:
ಪಕ್ಷಪಾತವಿಲ್ಲದೆ ಎಲ್ಲರ ಮೇಲೆ ಇಂಪ್ರೆಷನ್ ಬೀರಲು ಪ್ರಯತ್ನಿಸುವ ಅಭ್ಯಾಸ. - ರಹಸ್ಯ ಸಂಬಂಧಗಳ ನಿರ್ವಹಣೆ:
ಒಬ್ಬರ ಜೊತೆ ಸಂಬಂಧದಲ್ಲಿದ್ದರೂ ಮತ್ತೊಬ್ಬರೊಂದಿಗೆ ಪ್ರೀತಿಯ ಲೆಕ್ಕಾಚಾರ. - ಸಿಂಗಲ್ ಅಂತ ತೋರಿಸಿಕೊಳ್ಳುವುದು:
ಸೋಶಿಯಲ್ ಮೀಡಿಯಾ ಅಥವಾ ಸಾರ್ವಜನಿಕವಾಗಿ ಪ್ರೀತಿಯಲ್ಲಿ ಇರುವುದನ್ನು ಮುಚ್ಚಿಡುವುದು. - ಮೂರನೇ ವ್ಯಕ್ತಿಗಳ ಮೇಲೆ ಆಕರ್ಷಣೆಯಿಂದ ನಡೆದುಕೊಳ್ಳುವುದು:
ಮೂರನೇ ವ್ಯಕ್ತಿಗಳ ಜೊತೆ ಫ್ಲರ್ಟ್ ಮಾಡುವುದು, ಕ್ರಶ್ ಆಗಿ ಸಂಪರ್ಕ ಮಾಡುವುದು.