‘ನಗುತ್ತಾ ಇದ್ರೆ ಜೀವನ ಸುಂದರ’ ಎಂಬ ಮಾತು ಕೇಳಿದ್ದೀರಾ? ಆದರೆ ಮದುವೆಯ ನಂತರ ಕೆಲವರು ನಗುವುದು ನಿಲ್ಲಿಸುತ್ತಾರೆ ಎಂಬ ಹಾಸ್ಯ ಪ್ರಚಲಿತವಾಗಿದೆ. ಇಂತಹ ಮಾತುಗಳಿಗೆ ತಲೆಕೊಡದೆ, ನಿತ್ಯ ನಗುತ್ತಾ, ಮೋಜು ಮಸ್ತಿಯಿಂದ ಬದುಕುವ ದಂಪತಿಗಳೂ ನಮ್ಮ ಸುತ್ತಲೂ ಇದ್ದಾರೆ. ಅವರ ಜೀವನರೀತಿಯೂ ಬೇರೆಯದ್ದೇ. ಹಾಗಿದ್ರೆ, ಇಂಥಾ ಸಂತೋಷದ ಬದುಕು ಕಟ್ಟಿಕೊಳ್ಳುವ ರಹಸ್ಯವೇನು?
ಇಂಥ ದಂಪತಿ ಕೇವಲ ಆಕರ್ಷಣೆ ಅಥವಾ ಸಾಮಾನ್ಯ ಗುರಿಗಳಿಂದ ಮಾತ್ರ ಹತ್ತಿರವಾಗುವುದಿಲ್ಲ, ಭಾವನೆಗಳಿಂದ ಕೂಡಿದ ಸಂಬಂಧ ಹೊಂದಿರುತ್ತಾರೆ. ಕಷ್ಟದ ಸಮಯದಲ್ಲೂ ಪರಸ್ಪರ ನಗಿಸುವುದು, ಮನಸ್ಸನ್ನು ಹಗುರಗೊಳಿಸುವುದು ಅವರ ಬಾಂಧವ್ಯಕ್ಕೆ ಹೊಸ ಬಲ ನೀಡುತ್ತದೆ. ಒತ್ತಡದ ಸಂದರ್ಭದಲ್ಲಿ ಸಣ್ಣ ಸಂಗತಿಗಳನ್ನೂ ನಗುಹಾಸ್ಯದಿಂದ ತಡೆದುಕೊಳ್ಳುತ್ತಾರೆ.
ಅಲ್ಲದೇ ಈ ದಂಪತಿಗಳು ತಮ್ಮ ನಡುವಿನ ನೆನಪುಗಳನ್ನು ಆಸ್ತಿಯಾಗಿ ಇಟ್ಟುಕೊಳ್ಳುತ್ತಾರೆ. ಒಂದು ವೇಳೆ ಜೀವನದಲ್ಲಿ ಕಷ್ಟ ಬಂತು ಅಂದ್ರೆ, ಹಿಂದಿನ ಸಂತೋಷದ ಕ್ಷಣಗಳನ್ನು ನೆನೆಸಿಕೊಳ್ಳುವ ಮೂಲಕ ಮನಸ್ಸಿಗೆ ಶಾಂತಿ ನೀಡುತ್ತಾರೆ. ದೈನಂದಿನ ಜೀವನದಲ್ಲಿಯೇ ಸಂತೋಷವನ್ನು ಹುಡುಕುವ ಪ್ರಯತ್ನದಲ್ಲಿರುತ್ತಾರೆ. ರಜಾದಿನ ಅಥವಾ ಡೇಟಿಂಗ್ಗೆ ಕಾಯದೆ, ಪ್ರತಿದಿನದ ಸಮಯವನ್ನೂ ಮೋಜಿನೊಳಗೆ ಕಳೆಯುತ್ತಾರೆ.
ಅವರು ಒಂದೊಂದೇ ರೀತಿಯ ಹಾಸ್ಯದಿಂದ, ಕೇರ್ ಲೆಸ್ ಮೈಂಡ್ ಸೆಟ್, ತಮ್ಮದೇ ಆದ ಶೈಲಿಯ ಮಾತುಗಳಿಂದ ಬಾಂಧವ್ಯದಲ್ಲಿ ಆಳತೆ ತರುತ್ತಾರೆ. ಸಂವೇದನೆಗಳಿಗೆ ಮಿತಿ ಇಟ್ಟು, ಹಾಸ್ಯವನ್ನು ನೋವು ಉಂಟುಮಾಡದಂತೆ ಬಳಕೆ ಮಾಡುತ್ತಾರೆ. ಗಂಭೀರ ಚರ್ಚೆಗಳ ಅಗತ್ಯ ಬಂದಾಗ, ತಾಳ್ಮೆಯಿಂದ ಕೇಳಿ, ಪರಸ್ಪರ ಗೌರವವನ್ನು ಕಾಪಾಡುತ್ತಾರೆ.
ಇದರಿಂದ ತಿಳಿಯುವುದೇನೆಂದರೆ, ನಗು, ಆತ್ಮೀಯತೆ ಮತ್ತು ಸಂತೋಷದ ಸಂವಹನ ದಾಂಪತ್ಯ ಜೀವನವನ್ನು ದೀರ್ಘಕಾಲ ನಡೆಸಿಕೊಂಡು ಹೋಗುವ ಮೂಲ ಅಸ್ತ್ರವಾಗಿದೆ.