ಎಲ್ಲಾ ರೀತಿಯ ಸಂಬಂಧಗಳಲ್ಲಿ ಶಾಂತಿ, ಸಮಾಧಾನ, ನೆಮ್ಮದಿ ಮುಖ್ಯವಾಗಿರುತ್ತದೆ. ಹಾಗಂತ ಜಗಳಗಳು, ಕೋಪ ಇಲ್ಲ ಅಂತೇನಲ್ಲ. ಈ ರೀತಿಯ ಸಂದರ್ಭಗಳನ್ನು ನಾವು ಹೇಗೆ ನಿಭಾಯಿಸುತ್ತೇವೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಇವತ್ತು ನಾವು ನಿಮ್ಮ ಸಂಗಾತಿಗಳ ಜೊತೆಗೆ ಹೇಗೆ ಸಂಘರ್ಷಗಳನ್ನು ಪರಿಹರಿಸಿಕೊಳ್ಳಬಹುದು ಎಂಬುದರ ಕುರಿತು ಸಲಹೆ ನೀಡುತ್ತೇವೆ.
ಭಾವನಾತ್ಮಕ ನಿಯಂತ್ರಣ
ವಾದ ವಿವಾದಗಳನ್ನು ಆರೋಗ್ಯಕರ ಸಂವಹನವನ್ನಾಗಿ ಮಾಡುವುದು ಸಂಗಾತಿಗಳ ಕೈಯಲ್ಲಿದೆ. ವಾದಗಳು ಅತಿರೇಕಕ್ಕೆ ಹೋಗುತ್ತಿದೆ ಎಂದಾದಾಗ, ಇದನ್ನು ಇಲ್ಲಿಗೆ ಬಿಟ್ಟು ಬಿಡೋಣ ಎನ್ನುವುದು ಕಟುವಾದ ಮಾತುಗಳು ಬಾರದಂತೆ ತಡೆಹಿಡಿಯುತ್ತದೆ.
ಮುಕ್ತವಾಗಿ ಸಂವಹನ ನಡೆಸಿ
ಒಬ್ಬರು ಮಾತನಾಡುತ್ತಿದ್ದರೆ ಇನ್ನೊಬ್ಬರು ಶಾಂತವಾಗಿ ಆಲಿಸಿ. ಹೀಗೆ ಇಬ್ಬರು ಮಾತನಾಡಿಕೊಂಡು ಹೇಳುವುದನ್ನು ಆಲಿಸದೆ ಜಗಳವನ್ನು ಮುಂದುವರಿಸುವುದು ಇನ್ನಷ್ಟು ಭಿನ್ನಾಭಿಪ್ರಾಯಗಳನ್ನುಂಟು ಮಾಡಬಹುದು.
ಅಸಮ್ಮತಿಯನ್ನು ನಯವಾಗಿ ಸೂಚಿಸಿ
ನಿಮ್ಮ ಸಂಗಾತಿಯ ಮಾತುಗಳಲ್ಲಿ ನಿಮಗೆ ಅಸಮ್ಮತಿ ಇದ್ದರೂ ಅವರಿಗೆ ನೋವಾಗದಂತೆ ಅದನ್ನು ತಿಳಿಸಿ. ಇದರಿಂದ ವಾದ ವಿವಾದ ಅತಿರೇಕಕ್ಕೆ ಹೋಗುವುದನ್ನು ತಡೆಯಬಹುದು.
ಆದ್ಯತೆಗಳನ್ನು ಬದಲಾಯಿಸಿ
ಒಮ್ಮೆ ನೀವು ಅವರ ಸ್ಥಾನದಲ್ಲಿದ್ದರೆ ಏನು ಮಾಡುತ್ತಿದ್ದಿರಿ ಎಂಬುದಾಗಿ ಯೋಚಿಸಿ. ಅವರ ಭಾವನೆಗಳನ್ನು ಸ್ವೀಕರಿಸಿ. ಅವರು ಯಾವ ರೀತಿಯಲ್ಲಿ ಕಷ್ಟಪಡುತ್ತಿದ್ದಾರೆ, ಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ.