ಮನೆಯಲ್ಲಿ ಸ್ನೇಹ, ಪ್ರೀತಿ, ಸಹನೆ ಇವುಗಳೆ ಸಂಬಂಧದ ಮೂಲ ಅಡಿಪಾಯ. ಕೆಲವೊಮ್ಮೆ ಜಗಳಗಳು ಆಗೋದು ಸಹಜ. ಆದರೆ ಹೆಂಡತಿ ಪದೇಪದೇ ಕೋಪಗೊಂಡು ಜಗಳ ಮಾಡ್ತಿದ್ರೆ ಅದು ಪ್ರೀತಿಯ ಕೊರತೆಯಲ್ಲ… ಒತ್ತಡ, ನಿರೀಕ್ಷೆಗಳು, ಅಥವಾ ಎಮೋಷನಲ್ ಒತ್ತಡ ಇರಬಹುದು. ಹಾಗಾಗಿ, ಪತ್ನಿ ಕೋಪಗೊಂಡಾಗ ನಾವು ಹೇಗೆ ವರ್ತನೆ ಮಾಡಬೇಕು ಎಂಬುದು ತುಂಬಾ ಮುಖ್ಯ. ಇವತ್ತಿನ ಲೇಖನದಲ್ಲಿ ನಿಮ್ಮ ಪತ್ನಿಯ ಮನಸ್ಸನ್ನು ಹೇಗೆ ಸಮಾಧಾನಪಡಿಸಬಹುದು ಅಂತ ನೋಡೋಣ.
ಶಾಂತವಾಗಿ ಆಲಿಸಿ – ಮಾತಾಡದಿರಲಿ, ಕೇಳಿ!
ಆಕೆ ಕೋಪಗೊಂಡು ಮಾತನಾಡ್ತಿದ್ರೆ ನಾವು ಕೂಡ ಆ ಕ್ಷಣದೊಳಗೆ ಉತ್ತರ ಕೊಡುವ ಬದಲು ಆಕೆ ಏನು ಹೇಳ್ತಾ ಇದ್ದಾಳೆ ಅನ್ನೋದು ಸಂಪೂರ್ಣವಾಗಿ ಕೇಳೋದು ಮುಖ್ಯ. “ನಾನಿನ್ನು ಕೇಳ್ತೀನಿ” ಅನ್ನೋ ಭಾವನೆ ಕೇವಲ ಮಾತಲ್ಲ, ಆಕೆಗೆ ನಮಗೆ ಅಷ್ಟೆ ಕಾಳಜಿ ಇದೆ ಅನ್ನಿಸುತ್ತೆ.
ಸ್ವಲ್ಪ ಅವಕಾಶ ನೀಡಿ – ಒಬ್ಬಂಟಿಯಾಗಿರಲಿ
ವಿಷಯ ತುಂಬಾ ತೀವ್ರವಾಗಿದ್ರೆ ಆಕೆಗೆ ಸ್ವಲ್ಪ ಏಕಾಂತ ಬೇಕಾಗಿರಬಹುದು. ಆಕೆಗೆ ಅಳು, ಯೋಚನೆ, ಶಾಂತಿ ಎಲ್ಲವೂ ಒಬ್ಬಂಟಿಯಾಗಿ ಬೇಕಾಗುತ್ತೆ. “ನಿನ್ನನ್ನು ಒಬ್ಬಂಟಿಯಾಗಿ ಬಿಡ್ತೀನಿ, ನೀನು ಒಳ್ಳೆದಾಗಿ ಯೋಚಿಸು” ಅನ್ನೋದು ಸಹಜವಾದ ಸಹಕಾರ.
ಕ್ಷಮೆ ಕೇಳೋದು ಬುದ್ಧಿವಂತಿಕೆಯ ಗುರುತು
ತಪ್ಪು ನಮ್ಮದಾಗಿರಲಿ ಇಲ್ಲದಿರಲಿ, “sorry ಕಣೆ ” ಅನ್ನೋದು ಯಾವುದೇ ಸಂಬಂಧ ಉಳಿಸುವ ಪ್ರಮುಖ ಅಸ್ತ್ರ. ಕ್ಷಮೆಯಾಚನೆ ನಮ್ಮ ಪ್ರೀತಿಯ ಸಂಕೇತ. ಅದು ಸಂಬಂಧವನ್ನು ಮತ್ತೆ ಚಿಗುರಿಸುತ್ತೆ.
ಹೃದಯದಿಂದ ಮಾತಾಡಿ – ಸತ್ಯ, ಸರಳವಾಗಿ
“ನೀನು ನನ್ನ ಬದುಕಿನಲ್ಲಿ ಮುಖ್ಯ” ಅನ್ನೋ ಮಾತು ಎಷ್ಟು ನಿಜವಾಗಿದ್ದರೂ, ಕೆಲವೊಮ್ಮೆ ಹೇಳೋದೇ ಮರೀತೀವಿ. ಹೃದಯದಿಂದ ಆಕೆ ಹೇಗೆ ನಮ್ಮ ಬದುಕಿನ ಭಾಗ, ಹೇಗೆ ಅವಳಿಲ್ಲದೆ ಜೀವನ ಖಾಲಿ ಅನ್ನೋದು ಹೇಳಿದ್ರೆ ಕೋಪ ಕರಗ್ತದೆ.
ಸರ್‌ಪ್ರೈಸ್ ಕೊಡಿ – ಸಣ್ಣದು ಸಾಕು
ಹೆಂಡತಿಗೆ ಸರ್‌ಪ್ರೈಸ್ ಅಂದರೆ ತುಂಬಾ ಇಷ್ಟ. ಅವಳಿಗೆ ಇಷ್ಟವಾದ ಹೂವು, ಸಿಹಿ ತಿಂಡಿ ಅಥವಾ ಒಂದು ಪ್ರೀತಿಯ ನೋಟ ಕೂಡ ಸಾಕು! ಈ ತೋರಿಕೆ ಅವಳ ಮನಸ್ಸಿಗೆ ಸಂತೋಷ ತರೋದು ಖಚಿತ.
ಸಂಬಂಧದಲ್ಲಿ ಒತ್ತಡ, ಮನಸ್ತಾಪ, ಜಗಳ ಎಲ್ಲವೂ ಆಗುತ್ತವೆ. ಆದರೆ ಪ್ರೀತಿಯ ಚಿಕ್ಕ ಚಿಕ್ಕ ಪ್ರಯತ್ನಗಳು, ಸಹನೆ, ಹಾಗೂ ಬುದ್ಧಿವಂತಿಕೆಯಿಂದ ವರ್ತಿಸಿದರೆ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. ಪತ್ನಿಯ ಒಂದು ನಗು, ಒಂದು ಮಮತೆ ಮನೆಗೆ ಹೊಸ ತ್ರಾಣ ತರುತ್ತದೆ. ಆದ್ದರಿಂದ ಇವತ್ತು ಇದನ್ನ ಪ್ರಯತ್ನಿಸಿ ನೋಡಿ – ಬದಲಾವಣೆ ನಿಜವಾಗಿಯೂ ಕಾಣಿಸುತ್ತೆ!