Tuesday, November 25, 2025

Relationship | ಈ ಅಭ್ಯಾಸಗಳು ನಿಮ್ಮಲ್ಲಿದ್ರೆ ಇವತ್ತೇ ಬಿಟ್ಟುಬಿಡಿ: ಹುಡುಗಿಯರಿಗೆ ಒಂದು ಚೂರು ಇಷ್ಟವಾಗೋಲ್ಲ

ಸಂಬಂಧ ಎನ್ನುವುದು ಕೇವಲ ಪ್ರೀತಿ ಮತ್ತು ಆಕರ್ಷಣೆ ಮಾತ್ರವಲ್ಲ, ಇಬ್ಬರ ನಡವಳಿಕೆಗಳ ಸಮತೋಲನ ಕೂಡ ಪ್ರಮುಖ. ಹುಡುಗಿಯರು ತಮ್ಮ ಸಂಗಾತಿಯಲ್ಲಿ ಬುದ್ಧಿವಂತಿಕೆ, ಜವಾಬ್ದಾರಿತನ ಮತ್ತು ಕಾಳಜಿಯನ್ನು ಬಯಸಿದರೂ, ಕೆಲವು ಹುಡುಗರ ವರ್ತನೆಗಳು ಅವರಿಗೆ ಅಸಹ್ಯವಾಗಬಹುದು. ಸಣ್ಣ ತಪ್ಪುಗಳೇ ಕೆಲವೊಮ್ಮೆ ದೊಡ್ಡ ಅಂತರವನ್ನು ನಿರ್ಮಿಸಬಹುದು.

  • ಎಲ್ಲಾ ಸಮಯವೂ ಸಲಹೆ ನೀಡುವುದು: ಅತಿಯಾಗಿ ಬುದ್ಧಿವಂತನಂತೆ ವರ್ತಿಸುವುದು, ಪ್ರತಿಯೊಂದು ವಿಷಯದಲ್ಲೂ ಸಲಹೆ ಕೊಡುವುದು ಹುಡುಗಿಯರಿಗೆ ನೇಗಟಿವ್ ಆಗಿ ತೋರುತ್ತದೆ. ಅವರ ವೈಯಕ್ತಿಕ ಇಷ್ಟಗಳಲ್ಲಿ ಹಸ್ತಕ್ಷೇಪ ಮಾಡಿದರೆ ಅವರು ದೂರವಾಗುವ ಸಾಧ್ಯತೆ ಜಾಸ್ತಿ.
  • ಅತಿಯಾದ ಕಾಳಜಿ: ಕಾಳಜಿ ಮಾಡೋದು ಉತ್ತಮ, ಪ್ರತಿಯೊಂದು ಕ್ಷಣವೂ “ಏನ್ ಆಯ್ತು?”, “ಎಲ್ಲಿ ಇದ್ದೀಯ?” ಎಂದು ಕರೆ–ಮೆಸೇಜ್ ಮಾಡುವುದು ಸಹ್ಯವಲ್ಲದ ನಡವಳಿಕೆಯಂತೆ ಕಾಣುತ್ತದೆ.
  • ತುಂಬಾ ಸಭ್ಯತೆ: ಯಾವಾಗಲೂ “ಹೌದು” ಎನ್ನುವ, ತಮಗೆ ಅಭಿಪ್ರಾಯವಿಲ್ಲದಂತೆ ವರ್ತಿಸುವ ಹುಡುಗರನ್ನು ಹುಡುಗಿಯರು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಇಂಥ ವರ್ತನೆ ವ್ಯಕ್ತಿತ್ವದ ಕೊರತೆಯನ್ನು ತೋರಿಸುತ್ತದೆ.
  • ತುಂಬಾ ಬೇಗ ಗಂಭೀರವಾಗುವುದು: ಸಂಬಂಧ ಆರಂಭದಲ್ಲೇ ಮದುವೆ, ಭವಿಷ್ಯ ಯೋಜನೆಗಳನ್ನು ಪ್ರಸ್ತಾಪಿಸುವುದು ಹುಡುಗಿಯರಿಗೆ ಒತ್ತಡ ಉಂಟುಮಾಡಬಹುದು. ಅತಿಯಾದ ಭಾವನಾತ್ಮಕತೆ ಅವರನ್ನು ಆತಂಕಕ್ಕೆ ತಳ್ಳಬಹುದು.
  • ಎಲ್ಲಾ ಸಮಯದಲ್ಲೂ ಲಭ್ಯರಾಗಿರುವುದು: ಪ್ರತೀ ಕ್ಷಣವೂ ಫೋನ್, ಚಾಟ್, ಕಾಲ್‌ಗಾಗಿ ಸಿದ್ಧವಾಗಿರುವುದು ತಮ್ಮದೇ ಜೀವನವಿಲ್ಲದಂತೆ ತೋರುತ್ತದೆ. ಆತ್ಮವಿಶ್ವಾಸ ಮತ್ತು ಸ್ವತಂತ್ರ ಸ್ವಭಾವ ಇಲ್ಲದಂತೆ ಭಾಸವಾಗುತ್ತದೆ.
error: Content is protected !!