April 17, 2026
Friday, April 17, 2026
spot_img

ಕಂಟೆಂಟ್‌ ಕ್ರಿಯೇಟರ್ಸ್‌ಗಳಿಗೆ ನ್ಯಾಯಸಮ್ಮತ ಆದಾಯ ಹಂಚಿಕೆ ಅಗತ್ಯ: ಅಶ್ವಿನಿ ವೈಷ್ಣವ್

ಡಿಜಿಟಲ್ ಯುಗದಲ್ಲಿ ಕಂಟೆಂಟ್ ಕ್ರಿಯೇಶನ್ ಪ್ರಮುಖ ವೃತ್ತಿಯಾಗುತ್ತಿರುವ ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮ ವೇದಿಕೆಗಳು ಸೃಜನಶೀಲರಿಗೆ ಸಮರ್ಪಕ ಆದಾಯ ಹಂಚಿಕೆ ನೀಡಬೇಕು ಎಂದು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಸುದ್ದಿ ಸಂಸ್ಥೆಗಳು, ಸಾಂಪ್ರದಾಯಿಕ ಮಾಧ್ಯಮ ಪ್ರತಿನಿಧಿಗಳು, ದೂರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಕಂಟೆಂಟ್ ಕ್ರಿಯೇಟರ್ಸ್, ಪ್ರಭಾವಿಗಳು, ಶಿಕ್ಷಕರು ಹಾಗೂ ಸಂಶೋಧಕರು ಯಾರು ವೇದಿಕೆಗಳನ್ನು ಬಳಸಿಕೊಂಡು ತಮ್ಮ ವಿಷಯವನ್ನು ಹಂಚಿಕೊಂಡರೂ ಅವರಿಗೆ ಸಮರ್ಪಕ ಪ್ರತಿಫಲ ದೊರಕಬೇಕು ಎಂದು ತಿಳಿಸಿದರು.

ಇದನ್ನೂ ಓದಿ:

ಸಮಾನ ಹಣಗಳಿಕೆ ಮಾದರಿಗಳನ್ನು ರೂಪಿಸುವುದು ಕಾಲದ ಅಗತ್ಯ ಎಂದು ಹೇಳಿದ ಅವರು, ಸಮಾಜದ ವಿವಿಧ ಸ್ತಂಭಗಳಾದ ಮಾಧ್ಯಮ, ಶಾಸಕಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆಗಳ ಮೇಲಿನ ನಂಬಿಕೆ ಕುಂದಬಾರದು ಎಂದು ಎಚ್ಚರಿಸಿದರು. ಡೀಪ್‌ಫೇಕ್ ತಂತ್ರಜ್ಞಾನ, ತಪ್ಪುಮಾಹಿತಿ ಅಭಿಯಾನಗಳು ಮತ್ತು ಕೃತಕ ವೀಡಿಯೊಗಳ ಪರಿಣಾಮದಿಂದ ಸಾರ್ವಜನಿಕ ವಿಶ್ವಾಸ ಕುಗ್ಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ನಂಬಿಕೆ ಉಳಿಸುವುದು ಎಲ್ಲಾ ಡಿಜಿಟಲ್ ವೇದಿಕೆಗಳ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !