Relationship | ಹೆಣ್ಣುಮಕ್ಕಳು ಬಯಸುವ ಈ ವಿಷಯಗಳನ್ನು ಅರಿತುಕೊಂಡರೆ ನಿಮ್ಮ ಸಂಸಾರ ಆನಂದ ಸಾಗರ! ಏನಂತೀರಾ?

ಇತ್ತೀಚಿನ ದಿನಗಳಲ್ಲಿ “ಹೆಣ್ಣು ಮಕ್ಕಳು ಹಣವಿರುವವರನ್ನು ಮಾತ್ರ ಪ್ರೀತಿಸುತ್ತಾರೆ” ಎಂಬ ತಪ್ಪು ಮನೋಭಾವನೆ ಹರಡುತ್ತಿದೆ. ಆದರೆ ನಿಜವಾಗಿ ನೋಡಿದರೆ, ಮಹಿಳೆಯರು ಹಣಕ್ಕಿಂತ ಹೆಚ್ಚು ಆಳವಾದ ವಿಷಯಗಳನ್ನು ತಮ್ಮ ಸಂಗಾತಿಯಿಂದ ಬಯಸುತ್ತಾರೆ. ಇವರ ಬಯಕೆಗಳು ಭಾವನೆಗಳಲ್ಲಿ ಆಧಾರಿತವಾಗಿದ್ದು, ವ್ಯಕ್ತಿತ್ವದ ಗುಣಗಳನ್ನು ಹೆಚ್ಚು ಪ್ರೀತಿಸುತ್ತಾರೆ.

ಗೌರವ ಮತ್ತು ಸನ್ಮಾನ:
ಒಬ್ಬ ಹೆಣ್ಣು ತನ್ನ ಸಂಗಾತಿಯಿಂದ ಮೊದಲನೆಯದಾಗಿ ಗೌರವವನ್ನು ನಿರೀಕ್ಷಿಸುತ್ತಾಳೆ. ಅವಳ ಅಭಿಪ್ರಾಯ, ಆಯ್ಕೆ, ನಿರ್ಧಾರಗಳ ಮೇಲೆ ಭರವಸೆ ನೀಡುವ ಸಂಗಾತಿ ಅವಳ ಮನಸ್ಸು ಗೆಲ್ಲುತ್ತಾನೆ. ಸಾರ್ವಜನಿಕವಾಗಿ ಅಥವಾ ಮನೆಯೊಳಗೆ ಅವಳನ್ನು ಅಪಮಾನಿಸುವ ಬದಲು, ಗೌರವದಿಂದ ನಡೆಸಿಕೊಳ್ಳುವುದು ಅವಳಿಗೆ ಮುಖ್ಯ.

Happy couple cooking dinner together Happy couple cooking dinner together in their loft kitchen at home. Man preparing vegetable salad for his girlfriend, copy space couples stock pictures, royalty-free photos & images

ಭಾವನಾತ್ಮಕ ಬೆಂಬಲ:
ಹೆಣ್ಣುಗಳು ತಮ್ಮ ಸಂತೋಷ, ನೋವು, ಭಯಗಳು ಹಂಚಿಕೊಳ್ಳಲು ಭರವಸೆಯ ಸಂಗಾತಿಯನ್ನು ಹುಡುಕುತ್ತಾರೆ. ಅವಳ ಮಾತುಗಳಿಗೆ ಕಿವಿಗೊಡುವ, ಅವಳ ಜೊತೆಗೆ ಭಾವನೆ ಹಂಚಿಕೊಳ್ಳುವ ವ್ಯಕ್ತಿ ಅವಳಿಗೆ ಹಣಕ್ಕಿಂತ ಮೌಲ್ಯವಾಗಿರುತ್ತಾನೆ.

ಸಮಯ ಮೀಸಲಿಡುವ ಮನೋಭಾವ:
ದಿನಚರಿಯಲ್ಲಿ ಸ್ವಲ್ಪ ಸಮಯವನ್ನಾದರೂ ತನ್ನಿಗಾಗಿ ಮೀಸಲಿಟ್ಟ ಸಂಗಾತಿಯನ್ನು ಹೆಣ್ಣು ಬಹಳಷ್ಟು ಮೆಚ್ಚುತ್ತಾಳೆ. ಜೊತೆಯಾಗಿ ಸಣ್ಣಪುಟ್ಟ ಸ್ಫೂರ್ತಿದಾಯಕ ಕ್ಷಣಗಳನ್ನು ಕಳೆಯುವ ಮೂಲಕ ಅವಳು ನೆಮ್ಮದಿಯನ್ನು ಅನುಭವಿಸುತ್ತಾಳೆ.

Happy face at the beach. Two lovers in a hug, in love. couples stock pictures, royalty-free photos & images

ವೃತ್ತಿ ಬೆಂಬಲ:
ಇಂದಿನ ಮಹಿಳೆಯು ಸ್ವತಂತ್ರವಾಗಿರಲು ಬಯಸುತ್ತಾಳೆ. ಅವಳ ಉದ್ಯೋಗ, ಕನಸುಗಳಿಗೆ ಬೆಂಬಲ ನೀಡುವ ಸಂಗಾತಿ ಅವಳಿಗೆ ನಿಜವಾದ ನೆರವಾಗುತ್ತಾನೆ. ಹಣಕ್ಕಿಂತ ಅವಳ ಬೆಳವಣಿಗೆಗೆ ಆಸಕ್ತಿಯಿರುವ ಸಂಗಾತಿಯು ಅಮೂಲ್ಯ.

ಮನೆಯ ಹೊಣೆ:
ಸಮಾನತೆಗಾಗಿ ಹೆಣ್ಣು ಮನೆಯಲ್ಲಿ ಮಾಡಬೇಕಾದ ಕೆಲಸಗಳಲ್ಲಿ ಪಾಲುದಾರನ ಸಹಕಾರವನ್ನು ನಿರೀಕ್ಷಿಸುತ್ತಾಳೆ. ಇವು ಅವಳಿಗೆ ಮೌಲ್ಯವಾಗುತ್ತವೆ ದುಡ್ಡಿಗೆ ಸಮಾನವಲ್ಲ.

Portrait of Loving Young Indian Couple Enjoys Browsing Online Shopping Websites Together On A Laptop, While Sitting Cozily On Their Living Room Sofa. Browsing Interner, Choosing Products to Purchase Portrait of Loving Young Indian Couple Enjoys Browsing Online Shopping Websites Together On A Laptop, While Sitting Cozily On Their Living Room Sofa. Browsing Interner, Choosing Products to Purchase couples stock pictures, royalty-free photos & images

ಸಂಕ್ಷಿಪ್ತವಾಗಿ ಹೇಳಬೇಕಾದರೆ, ಹೆಣ್ಣು ಮಕ್ಕಳಿಗೆ ಹಣಕ್ಕಿಂತ ಹೆಚ್ಚು ಅವಳಿಗೆ ಗೌರವ, ಸಮಯ, ಭಾವನೆ, ಬೆಂಬಲ, ಹಾಗೂ ಜವಾಬ್ದಾರಿ ಹಂಚಿಕೆ ಎನ್ನುವ ವಿಷಯಗಳು ಪ್ರೀತಿಯ ನಿಜವಾದ ಅರ್ಥವನ್ನು ಕೊಡುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!