February 5, 2026
Thursday, February 5, 2026
spot_img

Relationship | ನಿಮ್ಮ ಸಂಗಾತಿಯಲ್ಲಿ ಈ ಗುಣಗಳಿದ್ರೆ ಎಮೋಷನಲ್ ಮೆಚ್ಯೂರಿಟಿ ಇಲ್ಲ ಅಂತ ಅರ್ಥ!

ನಮ್ಮ ಮಾತು, ವರ್ತನೆ ಮತ್ತು ಪ್ರತಿಕ್ರಿಯೆಗಳು ನಮ್ಮ ವ್ಯಕ್ತಿತ್ವವನ್ನು ಹೇಳುತ್ತವೆ. ಯಾರಾದರೂ ತುಂಬಾ ಮೆಚ್ಯೂರ್ ಆಗಿ ನಡೆದುಕೊಳ್ಳುತ್ತಾರೆ ಎಂದರೆ ಜನರು ಸಹಜವಾಗಿಯೇ ಅವರಿಗೆ ಗೌರವ ಕೊಡುತ್ತಾರೆ. ಆದರೆ ಕೆಲವರಲ್ಲಿ ಇನ್ನೂ ಬಾಲಿಶ ಸ್ವಭಾವ ಕಾಣಿಸುತ್ತದೆ. ಅವರು ಎಷ್ಟೇ ವಯಸ್ಸಾಗಿದ್ದರೂ, ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು ಆಗದಿದ್ದರೆ ಅದು ಸ್ಪಷ್ಟವಾಗಿ ಗೋಚರಿಸುತ್ತದೆ. ಎಮೋಷನಲ್ ಮೆಚ್ಯೂರಿಟಿ ಎಂದರೆ ಎಲ್ಲಾ ಸಂದರ್ಭದಲ್ಲೂ ಶಾಂತವಾಗಿ, ಅರ್ಥಮಾಡಿಕೊಂಡು ಪ್ರತಿಕ್ರಿಯಿಸುವ ಗುಣ. ಇದು ಇಲ್ಲದಿದ್ದರೆ ಸಂಬಂಧಗಳಲ್ಲೂ,ಅನೇಕ ಸಮಸ್ಯೆಗಳು ಬರುತ್ತವೆ. ಒಬ್ಬ ವ್ಯಕ್ತಿ ಎಮೋಷನಲಿ ಮೆಚ್ಯೂರ್ ಅಲ್ಲ ಎಂಬುದು ಅವರ ಕೆಲವು ವರ್ತನೆಗಳಿಂದಲೇ ತಿಳಿದುಬರುತ್ತದೆ.

ತಪ್ಪು ಮಾಡಿದಾಗ ‘ಕ್ಷಮಿಸಿ’ ಎಂದು ಹೇಳುವುದು ದುರ್ಬಲತೆ ಅಲ್ಲ, ಅದು ದೊಡ್ಡತನ. ಆದರೆ ಕೆಲವರು ತಮ್ಮ ತಪ್ಪನ್ನೇ ಒಪ್ಪಿಕೊಳ್ಳುವುದಿಲ್ಲ. ಯಾವಾಗಲೂ ತಾವೇ ಸರಿ ಎಂಬ ಹಠ ಹಿಡಿಯುತ್ತಾರೆ.

ಮೆಚ್ಯೂರ್ ವ್ಯಕ್ತಿ ತಮಗೆ ಗೊತ್ತಿಲ್ಲದ ವಿಷಯವನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಮೆಚ್ಯೂರಿಟಿ ಕಡಿಮೆ ಇರುವವರು ಎಲ್ಲಕ್ಕೂ ಉತ್ತರ ಹೇಳಲು ಪ್ರಯತ್ನಿಸುತ್ತಾರೆ. ಇದು ಅವರ ಆತ್ಮವಿಶ್ವಾಸಕ್ಕಿಂತ ಅಹಂಕಾರವನ್ನು ತೋರಿಸುತ್ತದೆ.

ಇದನ್ನೂ ಓದಿ:

ಸಣ್ಣ ವಿಷಯಕ್ಕೂ ಕೋಪಗೊಳ್ಳುವುದು ಭಾವನೆಗಳ ಮೇಲೆ ಹಿಡಿತ ಇಲ್ಲ ಎನ್ನುವುದರ ಸೂಚನೆ. ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಬದಲು ಕೋಪದಿಂದ ಪ್ರತಿಕ್ರಿಯಿಸುವುದು ಸಂಬಂಧಗಳನ್ನು ದೂರ ಮಾಡುತ್ತದೆ.

ಕೆಲವರು ತಮ್ಮ ತಪ್ಪನ್ನು ಮರೆಮಾಚಲು ಅಥವಾ ಗಮನ ಬೇರೆಡೆಗೆ ತಿರುಗಿಸಲು ವಿಷಯಗಳನ್ನು ತಿರುಚಿ ಹೇಳುತ್ತಾರೆ.

ಮನಸ್ತಾಪವಾದಾಗ ಮಾತನಾಡದೇ ದೂರವಾಗಿರುವುದು ಸಮಸ್ಯೆಗೆ ಪರಿಹಾರ ಅಲ್ಲ. ಇದರಿಂದ ನೋವು ಮಾತ್ರ ಹೆಚ್ಚುತ್ತದೆ. ಮೆಚ್ಯೂರ್ ವ್ಯಕ್ತಿ ಮಾತನಾಡಿ ವಿಷಯವನ್ನು ಸರಿಪಡಿಸಲು ಪ್ರಯತ್ನಿಸುತ್ತಾರೆ.

ಒಟ್ಟಾರೆ, ಎಮೋಷನಲ್ ಮೆಚ್ಯೂರಿಟಿ ಅಂದ್ರೆ ವಯಸ್ಸಿನಿಂದ ಬರುವುದಲ್ಲ, ಅನುಭವದಿಂದ ಬರುವ ಗುಣ. ಭಾವನೆಗಳನ್ನು ಅರ್ಥಮಾಡಿಕೊಂಡು, ಶಾಂತವಾಗಿ ನಡೆದುಕೊಳ್ಳುವುದೇ ನಿಜವಾದ ಮೆಚ್ಯೂರಿಟಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !