ಪ್ರೀತಿಯನ್ನು ಸಣ್ಣ ವಿಷಯಗಳಲ್ಲಿ ವ್ಯಕ್ತಪಡಿಸಬಹುದು. ಅದು ನಿಮ್ಮ ಸಂಗಾತಿಯ ಕೈ ಹಿಡಿಯುವುದು, ಸಣ್ಣ ಕೆಲಸಗಳಲ್ಲಿ ಸಹಾಯ ಮಾಡುವುದು ಹೇಗೆ ಹತ್ತು ಹಲವು ಸಣ್ಣ ಸನ್ನೆಗಳು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧ ನಿರ್ವಹಿಸಲು ಸಹಕಾರಿಯಾಗುತ್ತದೆ.
ಅವರು ಹೇಳುವುದನ್ನು ಕೇಳಿ
ನಿಮ್ಮ ಸಂಗಾತಿ ತಮ್ಮ ದಿನದ ಬಗ್ಗೆ ಹೇಳಿಕೊಳ್ಳುತ್ತಿರಲಿ ಅಥವಾ ವೈಯಕ್ತಿಕವಾಗಿ ಏನನ್ನಾದರೂ ಹಂಚಿಕೊಳ್ಳುತ್ತಿರಲಿ, ಅವರಿಗೆ ನಿಮ್ಮ ಸಂಪೂರ್ಣ ಗಮನವನ್ನು ನೀಡಿ
ನಾನು ನಿನ್ನ ಬಗ್ಗೆ ಯೋಚಿಸುತ್ತಿದ್ದೇನೆ
ಒತ್ತಡದ ದಿನದಲ್ಲಿ ಒಂದು ಸಿಹಿ ಸಂದೇಶ ನಿಮ್ಮ ಸಂಗಾತಿಯ ಮನಸ್ಥಿತಿಯನ್ನು ಸರಿಮಾಡಬಹುದು. ಅದು ನಿಮ್ಮನ್ನು ಅವರ ಬಗ್ಗೆ ಯೋಚಿಸುವಂತೆ ಮಾಡಿದ ಮೀಮ್ ಆಗಿರಬಹುದು, ಸರಳವಾದ “ಐ ಮಿಸ್ ಯು” ಮೆಸೇಜ್ ಆಗಿರಬಹುದು.
ಅವರಿಗೆ ಇಷ್ಟವಾಗದ ಮನೆಕೆಲಸಗಳನ್ನು ಮಾಡಿ
ಅವರು ಇಷ್ಟಪಡದ ಲಾಂಡ್ರಿ ರಾಶಿಯನ್ನು ಸದ್ದಿಲ್ಲದೆ ವಾಷಿಂಗ್ ಮೇಷನ್ ಗೆ ಹಾಕಿಬಿಡಿ.ಅಥವಾ ಬೆಳಗಿನ ಕಾಫಿ ತಯಾರಿಸುವುದು, ಪಾತ್ರೆಗಳನ್ನು ತೊಳೆಯುವುದು ಇವುಗಳು ಪ್ರೀತಿಯನ್ನು ಹೇಳಿಕೊಳ್ಳುವ ಮತ್ತೊಂದು ವಿಧಾನ.
ಭಾವನಾತ್ಮಕ ನಂಬಿಕೆ, ಬೆಂಬಲ
ಬೆನ್ನಿನ ಮೇಲೆ ಸೌಮ್ಯವಾದ ಸ್ಪರ್ಶ, ನಡೆಯುವಾಗ ಕೈಗಳನ್ನು ಹಿಡಿದುಕೊಳ್ಳುವುದು ಅಥವಾ ದಿನದ ಕೊನೆಯಲ್ಲಿ ದೀರ್ಘವಾದ ಅಪ್ಪುಗೆಯು ಒಂದೇ ಒಂದು ಮಾತಿಲ್ಲದೆ ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ.