ವಿವಾಹ ಎಂಬುದು ವಿಶ್ವಾಸ, ಪ್ರೀತಿಯಲ್ಲಿ ಸಾಗಬೇಕಾದ ಪವಿತ್ರ ಬಾಂಧವ್ಯ. ಆದರೆ ಕೆಲವೊಮ್ಮೆ ಈ ಸಂಬಂಧದಲ್ಲಿ ಅಸಮಾಧಾನ, ಅಸ್ಪಷ್ಟತೆ ಅಥವಾ ಭಾವನಾತ್ಮಕ ದುರಾಸೆಗಳ ಪರಿಣಾಮವಾಗಿ ಕೆಲವರು ವಿವಾಹೇತರ ಸಂಬಂಧಗಳಲ್ಲಿ ತೊಡಗಿಕೊಳ್ಳುತ್ತಾರೆ. ಇವು ಬಹುಪಾಲು ಸಂದರ್ಭಗಳಲ್ಲಿ ದಾಂಪತ್ಯ ಸಂಬಂಧದ ಭಂಗಕ್ಕೆ ಕಾರಣವಾಗಬಹುದು. ಈ ಸಂಬಂಧಗಳ ಹಿಂದೆ ಯಾವ ಕಾರಣಗಳು ಇರುತ್ತವೆ.
ಭಾವನಾತ್ಮಕ ತೃಪ್ತಿ ಇಲ್ಲದಿರುವುದು:
ಹೆಚ್ಚು ಸಂದರ್ಭಗಳಲ್ಲಿ ಸಂಗಾತಿಯಿಂದ ಭಾವನಾತ್ಮಕ ಸಹಾಯ, ಪ್ರೀತಿ, ಗಮನ ಸಿಗದೆ ಇರುವವರು ಬೇರೆ ವ್ಯಕ್ತಿಗಳಲ್ಲಿ ಆ ಭಾವನಾತ್ಮಕ ತೃಪ್ತಿಯನ್ನು ಹುಡುಕುತ್ತಾರೆ. ಇದು ನಿಧಾನವಾಗಿ extramarital affair ಗೆ ಕಾರಣವಾಗಬಹುದು.
ಶಾರೀರಿಕ ಸಂಬಂಧದ ಕೊರತೆ:
ದಾಂಪತ್ಯದಲ್ಲಿ ಶಾರೀರಿಕ ಆಕರ್ಷಣೆ ಅಥವಾ ಸಂಪರ್ಕ ಕಡಿಮೆಯಾಗಿದ್ರೆ, ಕೆಲವರು ತಮ್ಮ ಶಾರೀರಿಕ ಅಗತ್ಯಗಳನ್ನು ಪೂರೈಸಲು ಹೊರಗಿನ ಸಂಬಂಧಗಳ ಕಡೆಗೆ ಹರಿಯುತ್ತಾರೆ.
ಮನಸ್ಸು ತುಂಬದ ಸಂಬಂಧ:
ಕಳೆದ ಕಾಲದ ಪ್ರೇಮಿಗಳು ಅಥವಾ ಹಳೆಯ ಸ್ನೇಹಿತರಿಂದ ಮತ್ತೆ ಸಂಪರ್ಕವೊಂದು ಬೆಳೆದು, ಅದು ನಿಧಾನವಾಗಿ affair ಗೆ ದಾರಿ ಮಾಡಬಹುದು. ಇದು nostalgia, unresolved emotions ನಿಂದ ಉದ್ಭವವಾಗುತ್ತದೆ.
ಗೌರವ ಮತ್ತು ಪ್ರಾಶಸ್ತ್ಯದ ಕೊರತೆ:
ಸಂಗಾತಿಯಿಂದ ತಾನು ಮೌಲ್ಯವಿಲ್ಲದವನು/ಇಲ್ಲದವಳು ಎಂದು ಭಾಸವಾದಾಗ, ತಾನೂ ಮುಖ್ಯನೆಂದು ಭಾಸವಾಗಿಸಲು ಹೊರಗಿನ ವ್ಯಕ್ತಿಯಿಂದ ಪ್ರಾಶಸ್ತ್ಯ ಹುಡುಕುತ್ತಾರೆ.
ಅನುಕೂಲತೆ ಮತ್ತು temptation :
ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳ ಮೂಲಕ ಇತ್ತೀಚೆಗೆ extramarital relationships ಬೆಳೆಸುವುದು ಸುಲಭವಾಗಿದೆ. ಕೆಲವರು ನಿಖರ ಕಾರಣವಿಲ್ಲದೆ new excitement ನಲ್ಲಿ ಹುಡುಕುವ ಉದ್ದೇಶದಿಂದ affair ಗಳಲ್ಲಿ ತೊಡಗಿಕೊಳ್ಳುತ್ತಾರೆ.
ಇವು ಸಾಮಾನ್ಯವಾಗಿ ಸಾಂಸ್ಕೃತಿಕ, ವೈಯಕ್ತಿಕ ಹಾಗೂ ಭಾವನಾತ್ಮಕ ಅಂಶಗಳ ಮಿಶ್ರಣವಾಗಿರಬಹುದು. ದಾಂಪತ್ಯ ಸಂಬಂಧದಲ್ಲಿ communication, mutual respect ಮತ್ತು emotional bonding ಉತ್ತಮವಾಗಿದ್ದರೆ ಈ ಸಮಸ್ಯೆಗಳಿಗೆ ತಡೆಯಾಗಬಹುದು.