ದಾಂಪತ್ಯ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಮುಕ್ತ ಸಂವಹನವೇ ಬಲವಾದ ಸಂಬಂಧದ ಅಡಿಪಾಯ ಎಂಬುದು ಎಲ್ಲರ ಭಾವನೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ, ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳುವುದು ಸಂಬಂಧದಲ್ಲಿ ಉದ್ವಿಗ್ನತೆ ಮತ್ತು ಭಿನ್ನಾಭಿಪ್ರಾಯ ಉಂಟುಮಾಡಬಹುದು. ಕೆಲವೊಂದು ವಿಚಾರಗಳು ತಾತ್ಕಾಲಿಕ ಭಾವನೆಗಳಾಗಿರಬಹುದು, ಅಥವಾ ಸತ್ಯವಾಗಿದ್ದರೂ ಹೇಳುವುದರಿಂದ ಸಂಬಂಧದಲ್ಲಿರುವ ಕಿರಿಕಿರಿಗೆ ಉಂಟಾಗಬಹುದು.
ಬೇರೆಯವರ ಬಗ್ಗೆ ಆಕರ್ಷಣೆ
ಒಬ್ಬ ವ್ಯಕ್ತಿ ಯಾವಾಗಲಾದರೂ ಇತರರ ಬಗ್ಗೆಯೂ ಆಕರ್ಷಣೆ ಹೊಂದಬಹುದು ಇದು ಸಹಜ. ಆದರೆ ಅದು ಕೆಲವೇ ಕ್ಷಣದ ಭಾವನೆ ಆಗಿರುವಾಗ, ನಿಮ್ಮ ಸಂಗಾತಿಗೆ ತಿಳಿಸಿದರೆ ಅದು ಆತನಿಗೆ/ಆಕೆಗೂ ಭಾವನಾತ್ಮಕ ನೋವನ್ನೇ ಕೊಡುತ್ತದೆ.
ಹೋಲಿಸುವ ಅಭ್ಯಾಸ
“ನಿನಗಿಂತ ನನ್ನ Ex ಒಳ್ಳೆಯವಳು” ಅಥವಾ “ಅವಳಾದ್ರೂ ನಿನ್ನಿಗಿಂತ ಚೆನ್ನಾಗಿರ್ತಾಳೆ” ಎಂಬುದನ್ನು ನೇರವಾಗಿ ಹೇಳುವುದು ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೋಲಿಕೆ ಎಂಬುದು ಸಂಗಾತಿಗೆ ತಮ್ಮ ವ್ಯಕ್ತಿತ್ವದ ಮೇಲೆ ಅನುಮಾನ ಹುಟ್ಟಿಸುತ್ತದೆ. ಅವರು “ನಾನು ನಿಂಗೆ ಏನು ಅಲ್ವ?” ಎಂಬ ಭಾವನೆಗೆ ಒಳಗಾಗುತ್ತಾರೆ.
ಬದಲಾಯಿಸಲಾಗದ ವಿಷಯಗಳ ಬಗ್ಗೆ ಪದೇಪದೇ ಟೀಕೆ
ಉದಾಹರಣೆಗೆ – ಅವರ ಎತ್ತರ, ಮೈಕಟ್ಟು, ಅಥವಾ ಕುಟುಂಬ ಹಿನ್ನಲೆ ಇವೆಲ್ಲ ಬದಲಾಯಿಸಲಾಗದ ಅಂಶಗಳು. ಇದು ಪದೇಪದೇ ಎತ್ತಿ ತೋರಿಸಿದರೆ, ಅವರು ವ್ಯಕ್ತಿತ್ವವದ ಮೇಲೆ ಪರಿಣಾಮ ಬೀರಬಹುದು.
ಮಾತಾಡಿದ ಟೀಕೆಗಳ ಹಂಚಿಕೆ
ನಿಕೆಲವೊಮ್ಮೆ, ನಿಮ್ಮ ಕುಟುಂಬ ಅಥವಾ ಸ್ನೇಹಿತರು ನಿಮ್ಮ ಸಂಗಾತಿಯ ಬಗ್ಗೆ ನಕಾರಾತ್ಮಕ ವಿಷಯಗಳನ್ನು ಹೇಳಬಹುದು, ಆದರೆ ಈ ಕಾಮೆಂಟ್‌ಗಳನ್ನು ಹಂಚಿಕೊಳ್ಳುವುದು ಅನಗತ್ಯ ಸಂಘರ್ಷಕ್ಕೆ ಕಾರಣವಾಗಬಹುದು. ಹೊರಗಿನ ಅಭಿಪ್ರಾಯಗಳು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಲು ಬಿಡುವುದಕ್ಕಿಂತ ನಿಮ್ಮ ಸಂಗಾತಿಯೊಂದಿಗೆ ಯಾವುದೇ ಸಮಸ್ಯೆಗಳನ್ನು ಖಾಸಗಿಯಾಗಿ ನಿಭಾಯಿಸುವುದು ಉತ್ತಮ.
ಬಾಡಿ ಶೇಮಿಂಗ್ ಅಥವಾ ದೇಹದ ಬಗ್ಗೆ ವ್ಯಂಗ್ಯ
ಯಾರಾದರೂ ನಿಮ್ಮ ಸಂಗಾತಿಯ ದೇಹದ ಬಗ್ಗೆ ವ್ಯಂಗ್ಯ ಮಾಡಿದರೆ, ನೀವು ನಗುತ್ತಾ ಹಂಚಿಕೊಂಡರೂ ಅದು ಸಂಬಂಧದಲ್ಲಿ ವಿಷ ಬಿತ್ತುತ್ತದೆ. ಇತರರು ಏನು ಹೇಳುತ್ತಾರೆಂದು ಕೇಂದ್ರೀಕರಿಸುವ ಬದಲು, ನಿಮ್ಮ ಸಂಗಾತಿಗೆ ಅವರು ಇರುವಂತೆಯೇ ಪ್ರೀತಿ ಮತ್ತು ಮೆಚ್ಚುಗೆಯನ್ನು ತೋರಿಸಿ.
ಸಾಮರ್ಥ್ಯ ಅಥವಾ ಕನಸುಗಳ ಬಗ್ಗೆ ಅನುಮಾನ
ಸಂಗಾತಿಯ ಸಾಮರ್ಥ್ಯಗಳು ಅಥವಾ ಅವರ ಗುರಿಗಳ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ, ಈ ಅನುಮಾನಗಳನ್ನು ಹಂಚಿಕೊಳ್ಳದಿರುವುದು ಉತ್ತಮ. ಅವರ ಮೇಲೆ ನಂಬಿಕೆಯಿಂದ ಪ್ರೋತ್ಸಾಹಿಸಿ. “ನಿನಗದು ಸಾಧ್ಯವಿಲ್ಲ” ಅನ್ನೋ ಮಾತು ಅವರ ಪ್ರಗತಿಗೆ ಅಡ್ಡಿಯಾಗಬಹುದು.
ಏನನ್ನೂ ಮುಚ್ಚಿಡಬೇಡಿ ಅನ್ನೋ ಮಾತು ಎಲ್ಲರಿಗೂ ಗೊತ್ತಿರುವ ಆದರ್ಶ. ಆದರೆ ದಾಂಪತ್ಯದಲ್ಲಿ “ಎಲ್ಲವನ್ನೂ ಹೇಳು” ಎಂಬುದರಿಂದ ಕೆಲವೊಮ್ಮೆ ನಾವು ಬಹುಮೂಲ್ಯ ಸಂಬಂಧವನ್ನೇ ಹಾಳುಮಾಡಿಕೊಳ್ಳಬಹುದು. ನಮ್ಮ ಮಾತುಗಳು – ಪ್ರೀತಿ ಮತ್ತು ಗೌರವದಿಂದ ಕೂಡಿರಬೇಕು. ಕೆಲವೊಮ್ಮೆ ಮೌನವೂ ಸಮಾಧಾನಕ್ಕೆ ಮಾರ್ಗ.