ಮಾನವ ಸಂಬಂಧಗಳು ಭಾವನೆಗಳ ಮೇಲೆ ಆಧಾರಿತವಾಗಿವೆ. ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರ ಮೇಲೆ ಪ್ರೀತಿ, ಕಾಳಜಿ, ಆತ್ಮೀಯತೆ ತೋರಿಸುವುದು ಸಹಜ. ಆದರೆ ಕೆಲವೊಮ್ಮೆ ಈ ಪ್ರೀತಿ ಅತಿಯಾದದಾಗಿ, ಅಸಹಜವಾಗಿ ತೋರಿಸಲ್ಪಡುತ್ತದೆ. ಇದನ್ನು ಲವ್ ಬಾಂಬಿಂಗ್ ಎನ್ನುತ್ತಾರೆ.
ಇದೊಂದು ರೀತಿಯ ಸೈಕೋ ಪ್ರೀತಿ, ಇದರಲ್ಲಿ ಪ್ರಾರಂಭದಲ್ಲಿ ಗುರುತಿಸುವುದು ಕಷ್ಟ. ಅವರು ಪ್ರೀತಿ ಗಳಿಸಲು ಏನು ಬೇಕಾದರು ಮಾಡಲು ಸಿದ್ಧ ಎಂಬಂತಿರುತ್ತಾರೆ, ನಿಮ್ಮ ಗಮನ ಸೆಳೆಯಲು ತುಂಬಾನೇ ಪ್ರಯತ್ನ ಮಾಡುತ್ತಾರೆ, ನಿಮ್ಮನ್ನು ತುಂಬಾನೇ ಇಷ್ಟಪಡುತ್ತಿರುತ್ತಾರೆ, ಇದನ್ನೆಲ್ಲಾ ನೋಡಿದ ಮೇಲೆ ನೀವು ಪ್ರೀತಿಯಲ್ಲಿ ಬೀಳುತ್ತಿದ್ದಂತೆ ಅವರ ನಿಜವಾದ ಬಣ್ಣ ಬಯಲಾಗುತ್ತೆ, ಅವರ ಕಂಟ್ರೋಲ್‌ನಲ್ಲಿ ನಿಮ್ಮನ್ನು ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ, ಇದು ಬರಿ ಪ್ರೀತಿಯಲ್ಲಿ ಮಾತ್ರವಲ್ಲ, ಮದುವೆಯಾದ ಮೇಲೆ ಕೂಡ ನಡೆಯಬಹುದು.
ಇದು ಆರಂಭದಲ್ಲಿ ಸುಖಕರವಾಗಿದೆಯೆನಿಸಿದರೂ, ನಂತರ ಅದು ತೊಂದರೆ ಮತ್ತು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು.
ಅತಿಯಾದ ಮೆಚ್ಚುಗೆಯ ಮಾತುಗಳು:
ಪ್ರಾರಂಭದಲ್ಲೇ “ನೀನು ನನ್ನ ಜೀವನದ ಪ್ರೇರೆಪಣೆ”, “ನೀನೇ ನನ್ನ ಪ್ರಪಂಚ” ಎಂಬ ಅತಿಯಾದ ಭಾವನಾತ್ಮಕ ಮಾತುಗಳನ್ನು ಬಳಸುತ್ತಾರೆ.
ನಿಮ್ಮ ಅಟೆನ್ಷನ್‌ಗೆ ಡಿಮ್ಯಾಂಡ್
ಅವರು ಫೋನ್ ಮಾಡಿದ ತಕ್ಷಣ ಪಿಕ್ ಮಾಡಬೇಕು, ನೀವು ಅವರ ಜೊತೆಯೇ ಟೈಮ್ ಸ್ಪೆಂಡ್ ಮಾಡಬೇಕು ಎಂದೆಲ್ಲಾ ಹೇಳುತ್ತಾರೆ. ನಿಮಗೆ ಸುತ್ತಲಿರುವ ಇತರರೊಂದಿಗಿನ ಸಂಪರ್ಕ ಕಡಿಮೆ ಮಾಡುವ ಪ್ರಯತ್ನ ಮಾಡುತ್ತಾರೆ. ಇದನ್ನು ಪ್ರೀತಿಯಲ್ಲಿ ತೋರಿಸುವ ಪೊಸೆಸಿವ್ ಎಂದೇ ಹೆಚ್ಚಿನವರು ಅಂದುಕೊಳ್ಳುತ್ತಾರೆ, ಆದರೆ ಈ ರೀತಿಯ ವರ್ತನೆ ಲವ್ ಬಾಂಬ್.
ಉಡುಗೊರೆಗಳು:
ಕಾಸ್ಟ್ಲಿ ಉಡುಗೊರೆಗಳು, ಸಿಹಿ ಸಂದೇಶಗಳು, ವಿಶೇಷ ಸರಪ್ರೈಸ್‌ಗಳು ಇತ್ಯಾದಿ ಮೂಲಕ ಅವರು ನಿಮ್ಮ ಮೆಚ್ಚುಗೆ ಪಡೆಯಲು ಯತ್ನಿಸುತ್ತಾರೆ.
ನಿಯಂತ್ರಣ ಮತ್ತು ಎಮೋಷನಲ್ ಬ್ಲಾಕ್ ಮೇಲ್ :
ಅವರು ನಿಮ್ಮ ಹಳೆಯ ಸ್ನೇಹಿತರು ಅಥವಾ ಕುಟುಂಬದ ಸದಸ್ಯರೊಂದಿಗೆ ಸಂಬಂಧಗಳನ್ನ ಮುರಿಯಲು ಒತ್ತಡ ತರುತ್ತಾರೆ. ನೀವು ಅವರ ಮಾತು ಕೇಳದೆ ಹೋದರೆ ಭಾವನಾತ್ಮಕವಾಗಿ ನಿಮ್ಮನ್ನ ಬ್ಲಾಕ್ ಮೇಲ್ ಮಾಡುತ್ತಾರೆ.
ನಿಮ್ಮನ್ನು ನೋಯಿಸಲು ಇಷ್ಟಪಡುತ್ತಾರೆ
ಅವರ ವರ್ತನೆಯಿಂದಾಗಿ ನಿಮ್ಮ ಮನಸ್ಸಿಗೆ ನೋವಾಗಿದೆ ಎಂದು ತಿಳಿದರೂ ಅದನ್ನು ಆಸ್ವಾದಿಸುತ್ತಾರೆ. ನಿಮ್ಮನ್ನು ನೋಯಿಸುವುದನ್ನು ಇಷ್ಟ ಪಡುತ್ತಾರೆ.