Relationship | ಮಹಿಳೆಯರ ಈ ಸ್ವಭಾವದಿಂದಲೇ ಕುಟುಂಬದ ನೆಮ್ಮದಿ ಹಾಳಾಗೋದಂತೆ!

ಮಹಿಳೆ ಎಂದರೆ ಬುದ್ಧಿವಂತಿಕೆ, ಸಹನೆ, ಪ್ರೀತಿ ಮತ್ತು ಮನೆಗೆ ನೆಮ್ಮದಿಯನ್ನು ನೀಡಬಲ್ಲ ಶಕ್ತಿ ಎಂದು ಗುರುತಿಸಲಾಗಿದೆ. ಆದರೆ ಕೆಲವೊಂದು ವಿಶಿಷ್ಟ ಗುಣಗಳು ಅಥವಾ ವರ್ತನೆಗಳು ಆಕೆಯ ಕುಟುಂಬಕ್ಕೆ ತೊಂದರೆ ತರಬಹುದು. ಇದು ಕೇವಲ ವೈಯಕ್ತಿಕ ಬದುಕನ್ನಷ್ಟೇ ಅಲ್ಲದೆ, ಮನೆಯ ಶಾಂತಿ ಮತ್ತು ಒಗ್ಗಟ್ಟಿಗೂ ಆಘಾತ ನೀಡುತ್ತದೆ.

ತೀವ್ರ ಕೋಪದ ಪ್ರವೃತ್ತಿಯು ಮೊದಲಾದ ತೊಂದರೆಯಾಗಿದೆ. ಸಣ್ಣ ವಿಷಯಕ್ಕೂ ಕೋಪಗೊಂಡು ಕಿರುಚುವುದು ಅಥವಾ ಜಗಳವಾಡುವುದು ಮನೆಯ ವಾತಾವರಣವನ್ನೇ ನಕಾರಾತ್ಮಕವಾಗಿಸುತ್ತದೆ. ಈ ಪರಿಸ್ಥಿತಿಗಳು ಮಕ್ಕಳ ಮನಸ್ಸಿನ ಮೇಲೆವೂ ದುಷ್ಪರಿಣಾಮ ಬೀರುತ್ತದೆ. ಅತಿಯಾದ ಕೋಪವು ಶಾಂತಿಯ ಶತ್ರು ಎಂಬುದನ್ನು ಮನಸ್ಸಿನಲ್ಲಿಡಬೇಕು.

ಇನ್ನು ಮಾತಿನ ಮೇಲೆ ಹಿಡಿತವಿಲ್ಲದವರ ಅಭ್ಯಾಸ ಕೂಡ ಸಮಸ್ಯೆಯ ಮೂಲವಾಗಬಹುದು. ಯೋಚನೆಯಿಲ್ಲದೆ, ನಿಂದಾತ್ಮಕ ಮಾತುಗಳು ಅಥವಾ ನಿರ್ಲಕ್ಷ್ಯ ಭಾವವನ್ನು ತೋರಿಸುವ ಮಾತುಗಳು ಸಂಬಂಧಗಳನ್ನು ಹಾಳುಮಾಡಬಹುದು. ಸಂಬಂಧಗಳಲ್ಲಿ ಪ್ರೀತಿ ಮತ್ತು ಗೌರವ ಉಳಿಯಬೇಕು ಎಂದರೆ, ಮಾತಿನಲ್ಲಿ ಸಹನೆ ಅಗತ್ಯ.

ಮನೆಯಲ್ಲಿನ ಶಾಂತಿಗೆ ನಿರಂತರ ವ್ಯತಿರಿಕ್ತವಾಗಿ ವರ್ತಿಸುವ ಗುಣವೂ ತೊಂದರೆಯ ಕಾರಣವಾಗುತ್ತದೆ. ಪ್ರತಿಯೊಂದು ಸಣ್ಣ ವಿಚಾರವನ್ನೂ ದೊಡ್ಡದಾಗಿಸಿ ಜಗಳಕ್ಕೆ ಕಾರಣವಾಗುವುದು ಮನೆಯ ಸಮತೋಲನವನ್ನು ನಾಶಮಾಡುತ್ತದೆ.

ಒಳ್ಳೆಯ ಹೆಂಡತಿ ಎಂದರೆ ಮನೆಯ ಎಲ್ಲ ಸದಸ್ಯರೊಂದಿಗೆ ಗೌರವದಿಂದ ವರ್ತಿಸುವವಳು, ತಮ್ಮ ಭಾವನೆಗಳನ್ನು ಪರಿಗಣಿಸಿ ಸಂತೋಷದ ವಾತಾವರಣ ಸೃಷ್ಟಿಸುವವಳು. ಹೆಂಡತಿಯ ಶಾಂತಸ್ವಭಾವ, ಬುದ್ಧಿವಂತಿಕೆ ಮತ್ತು ಸಹಾನುಭೂತಿ ಕುಟುಂಬದ ನೆಲೆಯನ್ನು ಬಲಪಡಿಸುತ್ತವೆ. ಜೀವನದಲ್ಲಿ ಯಶಸ್ಸು ಮತ್ತು ಶಾಂತಿ ಬಯಸುವ ಪ್ರತಿಯೊಬ್ಬ ಮಹಿಳೆಯೂ ಇಂತಹ ಗುಣಗಳನ್ನು ಬೆಳೆಸಿಕೊಳ್ಳುವುದು ಅವಶ್ಯಕ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!