RELATIONSHIP | ಲೈಫ್ ಚೆನ್ನಾಗಿರ್ಬೇಕಾ ? ಹಾಗಾದ್ರೆ ನಿಮ್ಮ ಸಂಗಾತಿಯಿಂದ ಈ ನಿರೀಕ್ಷೆ ಇಟ್ಕೋಬೇಡಿ!

ಒಂದು ರಿಲೇಶನ್ ಶಿಪ್ ನಲ್ಲಿ ಸಂಗಾತಿಯಿಂದ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ತುಂಬಾ ಸಾಮಾನ್ಯ ಸಂಗತಿ. ನಿಮ್ಮ ಸಂಗಾತಿಯೊಂದಿಗೆ ನೀವು ಮಾತನಾಡುವುದು ಮತ್ತು ಈ ನಿರೀಕ್ಷೆಗಳನ್ನು ಹಂಚಿಕೊಳ್ಳುವುದು ಎಷ್ಟು ಮುಖ್ಯವೋ, ನಿಮ್ಮ ಸಂಗಾತಿಯು ನಿಮ್ಮ ಈ ನಿರೀಕ್ಷೆಗಳನ್ನು ಪೂರೈಸಬಹುದೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಸಹ ಅಷ್ಟೇ ಮುಖ್ಯ.

ಆದರೆ ಅನೇಕ ಬಾರಿ ಜನರು ತಮ್ಮ ನಿರೀಕ್ಷೆಗಳನ್ನು ಈಡೇರದಿದ್ದಾಗ ತುಂಬಾ ದುಃಖಿತರಾಗುತ್ತಾರೆ. ತಮ್ಮ ಸಂಗಾತಿಯನ್ನು ದೂಷಿಸುತ್ತಾರೆ ಇದರಿಂದ ನಿಮ್ಮ ಸಂಬಂಧವು ಹದಗೆಡಲು ಪ್ರಾರಂಭಿಸುತ್ತದೆ.ಈ ರೀತಿಯಾಗಿ ಆಗಬಾರದೆಂದರೆ ನಾವು ಇಲ್ಲಿ ಅವಾಸ್ತವಿಕ ನಿರೀಕ್ಷೆಗಳ ಬಗ್ಗೆ ಹೇಳಲಿದ್ದೇವೆ.

ಜೊತೆ ಸಮಯ ಕಳೆಯುವುದು
ಸಂಗಾತಿಯು ತಮ್ಮ ಎಲ್ಲಾ ಸಮಯವನ್ನು ನಮ್ಮೊಂದಿಗೆ ಕಳೆಯಬೇಕು ಎಂದು ಯೋಚಿಸುವುದು. ಆದಾಗ್ಯೂ, ನಿಮ್ಮ ಈ ಒಂದು ನಿರೀಕ್ಷೆಯಿಂದ ನಿಮ್ಮ ಸಂಗಾತಿ ಕಿರಿಕಿರಿಗೊಳ್ಳಬಹುದು.

ಆದ್ಯತೆಗಳು
ತಮ್ಮ ಸಂಗಾತಿಯು ನಿಮಗೆ ಮೊದಲು ಆದ್ಯತೆ ನೀಡಬೇಕೆಂದು ನಿರೀಕ್ಷಿಸುತ್ತಾರೆ. ಸಂಬಂಧವು ಯಾವುದೇ ವ್ಯಕ್ತಿಯ ಜೀವನದಲ್ಲಿ ಬಹಳ ದೊಡ್ಡ ಭಾಗವಾಗಿದೆ. ಆದರೆ ಕೆಲವೊಮ್ಮೆ ಒಬ್ಬ ವ್ಯಕ್ತಿಗೆ ಸಂಬಂಧಗಳಿಗಿಂತ ಹೆಚ್ಚು ಮುಖ್ಯವಾದ ಅನೇಕ ವಿಷಯಗಳಿರುತ್ತವೆ.

ಸ್ವಾರ್ಥ
ಕೆಲವರು ಅವರ ಬಗ್ಗೆ ಮಾತ್ರ ಸದಾ ಯೋಚಿಸುತ್ತಿರುತ್ತಾರೆ. ಯಾವುದಾದರೂ ಸಮಸ್ಯೆ ಬಂದಾಗ ಅವರು ಬೇರೆಯವರ ಬಗ್ಗೆ ಚಿಂತಿಸದೇ ಕೇವಲ ಅವರ ಬಗ್ಗೆ ಮಾತ್ರ ಸ್ವಾರ್ಥಿಯಾಗಿ ಯೋಚಿಸುತ್ತಾರೆ.

ಭಿನ್ನಾಭಿಪ್ರಾಯ
ಸಂಗಾತಿಯ ನಡುವೆ ಭಿನ್ನಾಭಿಪ್ರಾಯವಿರಬಹುದು ಮತ್ತು ಇಬ್ಬರು ವಿಭಿನ್ನ ಜನರು ತಮ್ಮದೇ ಆದ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೃಷ್ಟಿಕೋನವನ್ನು ಇನ್ನೊಬ್ಬ ವ್ಯಕ್ತಿಯ ಮೇಲೆ ಹೇರುವ ಬದಲು ಗೌರವ ಮತ್ತು ಸ್ಪಷ್ಟತೆಯೊಂದಿಗೆ ಅಭಿಪ್ರಾಯವನ್ನು ಗೌರವಿಸುವುದು ಮುಖ್ಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!