ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಪ್ರೀಂಕೋರ್ಟ್ ಇಂದು ಮತ್ತೆ ಚುನಾವಣಾ ಬಾಂಡ್‌ಗಳ (Electoral Bond) ಬಗ್ಗೆ ಪೂರ್ಣ ಪ್ರಮಾಣ ಮಾಹಿತಿ ನೀಡದ ಎಸ್‌ಬಿಐ(SBI) ಅನ್ನು ತರಾಟೆಗೆ ತೆಗೆದುಕೊಂಡಿದ್ದು, ಯುನಿಕ್ ಆಲ್ಫಾನ್ಯೂಮರಿಕ್ ಸಂಖ್ಯೆ ಮತ್ತು ರಿಡೀಮ್ ಮಾಡಿದ ಬಾಂಡ್‌ಗಳ ಸೀರಿಯಲ್ ನಂಬರ್ ಸೇರಿದಂತೆ ಚುನಾವಣಾ ಬಾಂಡ್‌ಗಳ ಅಗತ್ಯ ಎಲ್ಲಾ ವಿವರಗಳನ್ನು ಗುರುವಾರ ಸಂಜೆ 5 ಗಂಟೆಯೊಳಗೆ ಬಹಿರಂಗಪಡಿಸುವಂತೆ ನಿರ್ದೇಶನ ನೀಡಿದೆ.
ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (DY Chandrachud) ನೇತೃತ್ವದ ಸಾಂವಿಧಾನಿಕ ಪೀಠ, ಎಸ್‌ಬಿಐನಿಂದ ಮಾಹಿತಿ ಪಡೆದ ತಕ್ಷಣ ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಪರಿಷ್ಕೃತ ವಿವರಗಳನ್ನು ಅಪ್‌ಲೋಡ್ ಮಾಡಬೇಕು, ಎಲ್ಲ ಪ್ರಕ್ರಿಯೆ ಬಳಿಕ ಎಸ್‌ಬಿಐ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಬೇಕು ಎಂದು ಸೂಚಿಸಿದೆ.
ಮಾಹಿತಿ ನಿಷ್ಪಕ್ಷಪಾತವಾಗಿ, ಯಾವ ಮಾಹಿತಿಯೂ ಮುಚ್ಚಿಟ್ಟಲ್ಲ ಎಂದು ಖಚಿತಪಡಿಸಿಕೊಳ್ಳಬೇಕು, ನೀವು ರಾಜಕೀಯ ಪಕ್ಷಕ್ಕಾಗಿ ನ್ಯಾಯಲಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ನಾವು ಭಾವಿಸುತ್ತೇವೆ. ಪ್ರತಿಯೊಂದು ಸಂಭಾವ್ಯ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಸಿಜೆಐ ಡಿ.ವೈ ಚಂದ್ರಚೂಡ್ ಖಡಕ್ ಆಗಿ ತಿಳಿಸಿದ್ದಾರೆ.