ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಕಾವೇರಿ ನೀರು ನಿಯಂತ್ರಣ ಸಮಿತಿ ನಿತ್ಯ ಐದು ಸಾವಿರ ಕ್ಯೂಸೆಕ್‌ನಂತೆ ಹದಿನೈದು ದಿನಗಳ ಕಾಲ ನೀರು ಹರಿಸಲು ಕರ್ನಾಟಕಕ್ಕೆ ಶಿಫಾರಸು ಮಾಡಿದೆ.
ಆಗಸ್ಟ್ 29 ರ ಆದೇಶ ಅಂತ್ಯವಾದ ಹಿನ್ನೆಲೆ ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಕಾವೇರಿ ನೀರು ನಿಯಂತ್ರಣ ಸಮಿತಿ ತನ್ನ ಹಳೆ ಆದೇಶವನ್ನು ಮುಂದಿನ ಹದಿನೈದು ದಿನ ಮುಂದುವರಿಸಲು ಸೂಚನೆ ನೀಡಿದೆ.
ಸಮಿತಿಯ ಈ ಆದೇಶದಿಂದ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಿಸುವ ಸಾಧ್ಯತೆಗಳಿದೆ.