Tuesday, November 25, 2025

ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಅಧ್ಯಕ್ಷೆ ನೀತಾ ಅಂಬಾನಿಗೆ ಜಾಗತಿಕ ಶಾಂತಿ ಗೌರವ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಅಧ್ಯಕ್ಷೆ ನೀತಾ ಎಂ ಅಂಬಾನಿ ಅವರಿಗೆ ಗೇಟ್ ವೇ ಆಫ್ ಇಂಡಿಯಾದಲ್ಲಿ 26/11ರ ದಾಳಿಯ 15 ವರ್ಷಗಳ ಸ್ಮರಣಾರ್ಥ “ಜಾಗತಿಕ ಶಾಂತಿ ಗೌರವ”ವನ್ನು ನೀಡಿ ಸನ್ಮಾನಿಸಲಾಯಿತು. ಈ ಪ್ರತಿಷ್ಠಿತ ಪ್ರಶಸ್ತಿಯು ಶಿಕ್ಷಣ, ಕ್ರೀಡೆ, ಆರೋಗ್ಯ, ಕಲೆ ಮತ್ತು ಸಂಸ್ಕೃತಿಯಾದ್ಯಂತ ಕಾಲಾತೀತ ಸಂಸ್ಥೆಗಳನ್ನು ನಿರ್ಮಿಸಿದ ಅವರ ಪರಂಪರೆಯನ್ನು ಗುರುತಿಸುತ್ತದೆ. ದೇಶದಲ್ಲಿ ಹಲವರ ಜೀವನವನ್ನು ಸುಧಾರಿಸಲು ಅವರ ದಣಿವರಿಯದ ಪ್ರಯತ್ನಗಳು, ಭರವಸೆ, ಸಹಾನುಭೂತಿ ಮತ್ತು ಅಂತರ್ಗತ ಪ್ರಗತಿಯ ಮೇಲೆ ನಿರ್ಮಿಸಲಾದ ಭವಿಷ್ಯಕ್ಕೆ ಜೀವಮಾನದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.

ಗೌರವ ಸ್ವೀಕರಿಸಿ ಮಾತನಾಡಿದ ನೀತಾ ಅವರು, “ನನ್ನ ಸ್ಪೂರ್ತಿ ಭಾರತ ಮತ್ತು ಭಾರತೀಯರು. ಇಲ್ಲಿರುವ ಪ್ರೀತಿ, ಗೌರವ ಮತ್ತು ನಮ್ಮತನ ವಿಶ್ವದ ಬೇರೆಲ್ಲೂ ಇಲ್ಲ. ಸುಭದ್ರ, ಸುರಕ್ಷಿತ ನಾಳೆಗಾಗಿ ದೇಶಕ್ಕಾಗಿ ಬಲಿದಾನ ಮಾಡಿದವರು ಮತ್ತು ಅವರ ಕುಟುಂಬದವರಿಗಾಗಿ ನಾನು ತಲೆಬಾಗಿ ನಮಿಸುತ್ತೇನೆ. ನೀವಿದ್ದರೆ ಭಾರತ ಸ್ವತಂತ್ರವಾಗಿರುತ್ತದೆ. ನೀವಿದ್ದರೆ ಭಾರತ ಸುರಕ್ಷಿತವಾಗಿರುತ್ತದೆ. ನಿಮ್ಮೆಲ್ಲರಿಗೂ ಕೋಟಿ ಕೋಟಿ ನಮನಗಳು” ಎಂದರು.

ಬಾಲಿವುಡ್ ನಟ ಶಾರೂಕ್ ಖಾನ್, ರಣವೀರ್ ಸಿಂಗ್, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ನೀತಾ ಅವರ ಪತಿ ಮುಕೇಶ್ ಅಂಬಾನಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!