ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ ಏರಿಕೆಯಿಂದಾಗಿ ಕಂಗೆಟ್ಟಿರುವ ಬೆಂಗಳೂರಿಗರಿಗೆ ಕೊಂಚ ರಿಲೀಫ್ ಸುದ್ದಿ ಸಿಕ್ಕಿದೆ, ಆಟೋ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ಈ ವರ್ಷದ ಆರಂಭದಿಂದಲೂ ದರ ಏರಿಕೆ ಸುದ್ದಿ ಕೇಳಿ ಬೆಂಗಳೂರಿಗರು ಬೇಸತ್ತಿದ್ದರು. ಬಸ್, ಮೆಟ್ರೋ, ನೀರಿನ ದರ ಏರಿಕೆ ಬಳಿಕ ಏ.1ರಿಂದ ಆಟೋ ದರ ಕೂಡ ಏರಿಕೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಆಟೋ ದರ ಏರಿಕೆಗೆ ಜಿಲ್ಲಾಡಳಿತ ತಾತ್ಕಾಲಿಕ ತಡೆ ನೀಡಿದೆ.
ಯುಗಾದಿ ಹಬ್ಬಕ್ಕೆ ಆಟೋ ಏರಿಕೆಯ ಗಿಫ್ಟ್ ಸಿಗುತ್ತದೆ ಎಂದು ಆಟೋ ಚಾಲಕರು, ಸಂಘಟನೆಗಳು ಖುಷಿಯಲ್ಲಿದ್ದರು. ಆದ್ರೆ ಸದ್ಯಕ್ಕೆ ದರ ಏರಿಕೆ ಆಗಲ್ಲ ಎಂದು ತಿಳಿದು ಕೊಂಚ ಬೇಸರಗೊಂಡಿದ್ದಾರೆ.