ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಆನೆ ದಾಳಿಯಿಂದ ಮೃತಪಟ್ಟ ಟ್ರ್ಯಾಕ್ಟರ್ ಚಾಲಕನ ಕುಟುಂಬಕ್ಕೆ ಕರ್ನಾಟಕ ಸರ್ಕಾರದಿಂದ 15 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ.
ಇದರಿಂದಾಗಿ ವಿಪಕ್ಷಗಳು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ನಮ್ಮ ರಾಜ್ಯದಲ್ಲಿ ಆನೆ ತುಳಿತದಿಂದ ಸಾವಾದರೆ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ಆದರೆ ಬೇರೆ ರಾಜ್ಯಕ್ಕೆ ೧೫ ಲಕ್ಷ ರೂಪಾಯಿ ಪರಿಹಾರ ನೀಡಿದ್ದೀರಿ. ಇದು ಜನರ ಹಣದ ದುರ್ಬಳಕೆ ಎಂದು ದೂರಿದ್ದರು. ಇದೀಗ ಅರಣ್ಯ ಸಚಿವ ಈಶ್ವರ ಖಂಡ್ರೆ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಮ್ಮ ತೆರಿಗೆ ಹಕ್ಕಿಗೂ, ಘೋಷಿಸಿರುವ ಪರಿಹಾರಕ್ಕೂ ಯಾವುದೇ ಸಂಬಂಧ ಇಲ್ಲ. ಮಾನವೀಯತೆ, ದಯೆ ಆಧಾರದ ಮೇಲೆ ಪರಿಹಾರ ನೀಡಿದ್ದೇವೆ. ಮೃತರಿಗೆ ಪರಿಹಾರ ಕೊಟ್ಟರೂ ಜನ ರಾಜಕೀಯ ಮಾಡಿದ್ರೆ ಏನು ಹೇಳೋದು ಎಂದು ಪ್ರಶ್ನಿಸಿದ್ದಾರೆ.