ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣವನ್ನು ರದ್ದು ಕೋರಿ ಬಿಎಸ್ ಯಡಿಯೂರಪ್ಪ ಸಲ್ಲಿಸಿದ ಅರ್ಜಿಯನ್ನು ಇಂದು ಹೈಕೋರ್ಟ್ ಏಕ ಸದಸ್ಯ ಪೀಠದಲ್ಲ ವಿಚಾರಣೆ ನಡೆಯಿತು.
ಬಳಿಕ ವಾದಮಂಡನೆಗೆ ಒಂದು ಗಂಟೆಯ ಕಾಲಾವಕಾಶ ಬೇಕು ಎಂದು ಬಿಎಸ್ ಯಡಿಯೂರಪ್ಪ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಮನವಿ ಮಾಡಿದಾಗ ಹೈಕೋರ್ಟ್ ಜನವರಿ 7ಕ್ಕೆ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿತು.
ಬಿಎಸ್ ಯಡಿಯೂರಪ್ಪ ಪರ ಹಿರಿಯ ವಕೀಲ ಸಿ ವಿ ನಾಗೇಶ್ ವಾದ ಮಂಡಿಸಿದರು. ವಾದ ಮಂಡನೆಗೆ ಮತ್ತೆ ಒಂದು ಗಂಟೆ ಸಮಯ ಬೇಕು ಎಂದು ಸಿವಿ ನಾಗೇಶ್ ಅವರು ಮನವಿ ಮಾಡಿದರು. ಎಸ್ಪಿಪಿ ದೂರುದಾರರ ಪರವಾದ ಮಂಡನೆಗೆ ಸಮಯ ಬೇಕೆಂದು ಮನವಿ ಮಾಡಿದರು ತಲಾ ಒಂದು ಗಂಟೆ ಸಮಯ ಬೇಕೆಂದು ಮನವಿ ಮಾಡಿದರು. ಹೀಗಾಗಿ ಅರ್ಜಿ ವಿಚಾರಣೆ ಜನವರಿ 7 ಕ್ಕೆ ಹೈಕೋರ್ಟ್ ಮುಂದೂಡಿದೆ.