ಮೆಹಂದಿ ಹಾಕಿರೋ ಕೈಗಳನ್ನ ನೋಡೋಕೆ ಅದೆಷ್ಟು ಸುಂದರ. ಆದರೆ ಅದು ಕೈಯಿಂದ ಹೋಗೋಕೆ ಶುರ್ವಾದಗ ಅರ್ಧ ಬಾಕಿ ಉಳಿದ ಡಿಸೈನ್ ನೋಡಿ ನಿಜಕ್ಕೂ ಬೇಜಾರ್ ಬರುತ್ತೆ. ಏನೂ ಯೋಚನೆ ಬೇಡ, ಮನೆಯಲ್ಲೇ ಇರುವ ಈ ಸರಳ ಟಿಪ್ಸ್ ಫಾಲೋ ಮಾಡಿ, ಮದರಂಗಿ ರಂಗು ಬೇಗನೆ ಮಾಯವಾಗುತ್ತದೆ. ರಾಸಾಯನಿಕ ಇಲ್ಲ, ಸೈಡ್ ಎಫೆಕ್ಟ್‌ಗಳೂ ಇಲ್ಲ. ಚಿಕ್ಕಚಿಕ್ಕ ಟ್ರಿಕ್ಸ್ ಬಳಸಿದ್ರೆ ಕ್ವಿಕ್ ಆಗಿ ಮೆಹಂದಿ ತೆಗೆಯಬಹುದು.
ಬೇಕಿಂಗ್ ಸೋಡಾ ಮತ್ತು ಲಿಂಬೆ ರಸ:
2 ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ, ಸ್ವಲ್ಪ ಲಿಂಬೆ ರಸ ಸೇರಿಸಿ ಪೇಸ್ಟ್ ಮಾಡಿ. ಕೈಗೆ ಹಚ್ಚಿ 2-3 ನಿಮಿಷ ಇಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ನಿಮ್ಮ ಚರ್ಮ ಸೆನ್ಸಿಟಿವ್ ಅಂದ್ರೆ ಇದನ್ನು ಬಳಸಬೇಡಿ.
ಟೂತ್‌ಪೇಸ್ಟ್:
ನಾನ್ ಜೆಲ್ ಟೂತ್‌ಪೇಸ್ಟ್‌ನ್ನು ಮೆಹಂದಿಯ ಮೇಲೆ ಹಚ್ಚಿ, ಒಣಗಿದ ಮೇಲೆ ಬ್ರಷ್ ಅಥವಾ ಟವಲ್‌ನಿಂದ ನಿಧಾನವಾಗಿ ಉಜ್ಜಿ. ನಂತರ ಬಿಸಿ ನೀರಿನಲ್ಲಿ ತೊಳೆಯಿರಿ.
ಉಪ್ಪು ನೀರಿನಲ್ಲಿ ನೆನೆಸೋದು:
ಬಿಸಿ ನೀರಿಗೆ ಉಪ್ಪು ಹಾಕಿ, 15-20 ನಿಮಿಷ ಕೈ ನೀರಲ್ಲಿ ಇಟ್ಟುಕೊಳ್ಳಿ. ನಂತರ ಒರೆಸಿ, ಲೋಶನ್ ಹಚ್ಚಿ. ದಿನಕ್ಕೆ ಎರಡು ಬಾರಿ ಮಾಡಿದ್ರೆ ಇನ್ನೂ ಬೇಗ ಫಲಿತಾಂಶ.
ಆಲಿವ್ ಆಯ್ಲ್ ಮತ್ತು ಸಕ್ಕರೆ:
1 ಟೇಬಲ್ ಸ್ಪೂನ್ ಆಲಿವ್ ಆಯ್ಲ್ + 1 ಟೀಸ್ಪೂನ್ ಸಕ್ಕರೆ ಮಿಕ್ಸ್ ಮಾಡಿ. ಆ ಮಿಶ್ರಣದಿಂದ ಹಚ್ಚಿ, ಸ್ಕ್ರಬ್ ಮಾಡಿ. ಸಾಫ್ಟ್ ಬಟ್ಟೆಯಿಂದ ಒರೆಸಿ. ಇದು ಎಲ್ಲಾ ಚರ್ಮದವರಿಗೆ ಸೂಕ್ತ.