ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ಸರಕಾರ ವಾಜಪೇಯಿ ಪಾರ್ಕ್‌ನ್ನು ತೆಂಗಿನಕಾಯಿ ಉದ್ಯಾನವನ(ಕೋಕನಟ್ ಪಾರ್ಕ್) ಎಂದು ಮರುನಾಮಕರಣ ಮಾಡಿದೆ.
ಇದೀಗ ಈ ನಡೆ ಬಿಜೆಪಿಯನ್ನು ಕೆರಳಿಸಿದ್ದು, . ಬಿಹಾರ ಸರ್ಕಾರದ ಈ ನಡೆ ವಿರುದ್ದ ಕೇಂದ್ರ ಸಚಿವ ನಿತ್ಯಾನಂದ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಟ್ನಾದ ಕಂಕಾರ್‌ಭಾಘ್‌ನಲ್ಲಿರುವ ಉದ್ಯಾನವನದ ಹೆಸರು ಇದೀಗ ಬದಲಾಗಿದೆ. ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮರನಾಮಕರಣ ಘೋಷಿಸಿದ್ದಾರೆ.
ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿದ್ದ ಉದ್ಯಾನವದ ಹೆಸರನ್ನು ತೇಜಸ್ವಿ ಯಾದವ್ ಬದಲಿಸಿದ್ದಾರೆ. ಶೀಘ್ರದಲ್ಲೇ ಸಿಎಂ ನಿತೀಶ್ ಕುಮಾರ್ ಮಧ್ಯಪ್ರವೇಶಿಸಿ ಇದನ್ನು ನಿಲ್ಲಿಸಬೇಕು ಎಂದು ನಿತ್ಯಾನಂದ ರೈ ಆಗ್ರಹಿಸಿದ್ದಾರೆ.ಬಿಹಾರ ಸರ್ಕಾರ ತಪ್ಪು ಹೆಜ್ಜೆ ಇಡುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಸಮಸ್ತ ಭಾರತೀಯರ ಹೃದಯ ಗೆದ್ದ ನಾಯಕ. ವಿಶೇಷವಾಗಿ ಬಿಹಾರಿಗಳಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಉದ್ಯಾನವ ಹೆಸರನ್ನು ಬದಲಿಸಿರುವುದು ಉತ್ತಮ ನಡೆಯಲ್ಲ. ತೇಜಸ್ವಿ ಯಾದವ್ ನಡೆ ವಿಪತ್ತಿಗೆ ಕಾರಣವಾಗಲಿದೆ. ಸದ್ದಿಲ್ಲದೆ ನಿತೀಶ್ ಕುಮಾರ್ ಹೆಸರೂ ಕೂಡ ಬದಲಿಸುತ್ತಾರೆ ಎಂದು ನಿತ್ಯಾನಂದ ಪೈ ಆಕ್ರೋಶ ಹೊರಹಾಕಿದ್ದಾರೆ.
ಇತ್ತೀಚೆಗೆ ಕೇಂದ್ರ ಸರ್ಕಾರ ದೆಹಲಿಯ ತೀನ್ಮೂರ್ತಿ ಭವನದ ‘ನೆಹರು ಮ್ಯೂಸಿಯಂ ಹಾಗೂ ಲೈಬ್ರರಿ ಸೊಸೈಟಿ’ ಹೆಸರನ್ನು ಬದಲಿಸಿದೆ. ಮ್ಯೂಸಿಯಂಗೆ ‘ಪ್ರಧಾನಮಂತ್ರಿ ಮ್ಯೂಸಿಯಂ ಹಾಗೂ ಗ್ರಂಥಾಲಯ ಸೊಸೈಟಿ’ ಎಂದು ಮರುನಾಮಕರಣ ಮಾಡಿತ್ತು.