ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಕನ್ನಡ ಭಾಷಾವಿಜ್ಞಾನಿ ಡಾ. ಕೆ. ಕೆಂಪೇಗೌಡರು ನಿಧನರಾಗಿದ್ದಾರೆ. ಮೈಸೂರಿನ ಸರಸ್ವತಿಪುರಂನಲ್ಲಿರುವ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು. ಚನ್ನಪಟ್ಟಣದ ಹೆಚ್ ಬ್ಯಾಡ್ರಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.
ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಮತ್ತು ಡಿ.ಲಿಟ್ (ಡಾಕ್ಟರ್ ಆಫ್ ಲಿಟರೇಚರ್) ಪದವಿ ಪಡೆದಿದ್ದ ಅವರು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ ಮತ್ತು ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವರ ನಿಧನವು ಕನ್ನಡ ಭಾಷಾ ವಿಜ್ಞಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
ಭಾಷಾ ವಿಜ್ಞಾನ ಕೋಶ, ಧ್ವನಿಮಾ ವಿಜ್ಞಾನ, ಸಾಮಾನ್ಯ ಭಾಷಾ ವಿಜ್ಞಾನ, ಕನ್ನಡ ಭಾಷಾ ಚರಿತ್ರೆ, ತೌಲನಿಕ ದ್ರಾವಿಡ ಭಾಷಾ ವಿಜ್ಞಾನ, ಕನ್ನಡ ಭಾಷ ಸ್ವರೂಪ ಸೇರಿದಂತೆ ಅನೇಕ ಲೇಖನಗಳನ್ನು ಕೊಡುಗೆಯಾಗಿ ನೀಡಿದ್ದಾರೆ.