ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮತ್ತಷ್ಟು ಚುರುಕಾಗಿದ್ದು, ಇಂದು ಸ್ಪಾಟ್ ವೇರಿಫಿಕೇಷನ್‌ಗಾಗಿ ದರ್ಶನ್ ಆಂಡ್ ಗ್ಯಾಂಗ್ ಚಿತ್ರದುರ್ಗದತ್ತ ಪ್ರಯಾಣ ಬೆಳೆಸಿದೆ.
ಪ್ರಕರಣ ಚಿತ್ರದುರ್ಗದಿಂದ ಶುರುವಾಗಿದ್ದು, ಅಲ್ಲಿಗೆ ಹೋಗಿ ಸ್ಪಾಟ್ ವೆರಿಫಿಕೇಷನ್ ಮಾಡಲು ಪೊಲೀಸರು ಸಜ್ಜಾಗಿದ್ದಾರೆ. ರೇಣುಕಾಸ್ವಾಮಿಯನ್ನ ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿದ್ದ ನಾಲ್ವರನ್ನ ಕರೆದೊಯ್ದು ಪೊಲೀಸರು ಸ್ಥಳ ಮಹಜರು ನಡೆಸಲಿದ್ದಾರೆ.
ಹತ್ಯೆಯಾಗಿರೋ ರೇಣುಕಾಸ್ವಾಮಿಯನ್ನ ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿ ಆರೋಪಿಗಳು ಬೆಂಗಳೂರಿಗೆ ಕರೆತಂದಿದ್ರು. ಹೀಗಾಗಿ ಇವತ್ತು ಚಿತ್ರದುರ್ಗದಲ್ಲಿ ಆರೋಪಿಗಳಿಂದ ಸ್ಥಳ ಮಹಜರು ನಡೆಯಲಿದೆ. ನಾಲ್ವರು ಆರೋಪಿಗಳನ್ನ ಬೆಂಗಳೂರಿನಿಂದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಕರೆದೊಯ್ಯಲಿದ್ದು ಸ್ಪಾಟ್ ವೆರಿಫಿಕೇಷನ್ ಮಾಡಿಸಲಿದ್ದಾರೆ. ಎ3 ಆರೋಪಿಯ ಸಲಹೆ ಮೇರೆಗೆ ಕಿಡ್ನಾಪ್ ಮಾಡಿದ್ದ ರಾಘವೇಂದ್ರ, ಕಾರ್ತಿಕ್ , ನಂದಿಶ್, ಪವನ್‌ನಿಂದ ಕಾಮಾಕ್ಷಿ ಪಾಳ್ಯ ಪೊಲೀಸರು ಕಿಡ್ನಾಪ್ ಸ್ಥಳದಲ್ಲಿ ಮಹಜರು ಮಾಡಿಸಲಿದ್ದಾರೆ.