ರೇಣುಕಾಸ್ವಾಮಿ ಮರ್ಡರ್‌ ಕೇಸ್‌: ನಟ ಚಿಕ್ಕಣ್ಣಗೂ ನೊಟೀಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಟ ದರ್ಶನ್  ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಈ ಪ್ರಕರಣದಲ್ಲಿ ಹೊಸ ಹೊಸ ಹೆಸರುಗಳು ಕೇಳಿ ಬರುತ್ತಿದ್ದು, ನಟ ಚಿಕ್ಕಣ್ಣಗೆ ಶೀಘ್ರದಲ್ಲೇ ನೊಟೀಸ್‌ ನೀಡಲಾಗುತ್ತದೆ ಎನ್ನಲಾಗಿದೆ. ನಟ ದರ್ಶನ್​​ ಶೆಡ್​ಗೆ ಹೋಗುವ ಮೊದಲು ಖಾಸಗಿ ರೆಸ್ಟೋರೆಂಟ್​ನಲ್ಲಿ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ, ನಿರ್ಮಾಪಕರು ಭಾಗಿಯಾಗಿದ್ದರು.

ಪಾರ್ಟಿಯಿಂದ ಎದ್ದು ನಟ ದರ್ಶನ್ ಮನೆಗೆ ಹೊಗಬೇಕಿತ್ತು. ಆದರೆ ಅವರು ತೆರಳಿದ್ದು ಪಟ್ಟಣಗೆರೆ ಶೆಡ್​ಗೆ. ಪಾರ್ಟಿ ಮುಗಿಸಿ ಬಂದು ಹಲ್ಲೆಗೈದು ರೇಣುಕಾಸ್ವಾಮಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಪಾರ್ಟಿಯಲ್ಲಿ ದರ್ಶನ್ ಜೊತೆ ಭಾಗಿಯಾದ ಹಿನ್ನೆಲೆಯಲ್ಲಿ ಚಿಕ್ಕಣ್ಣಗೆ ನೋಟಿಸ್​ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!